ನವದೆಹಲಿ: ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯೋಜನೆಯೊಂದಿಗಿನ ರಿಯಲ್ ಎಸ್ಟೇಟ್ ಬಿಲ್ನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.
ರಿಯಲ್ ಎಸ್ಟೇಟ್ ಖರೀದಿದಾರರ ಹಿತಾಸ್ತಿಯನ್ನು ಗಣನೆಗೆ ಪಡೆದು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ’ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ ೨೦೧೫’ ಅನ್ನು ಪರಿಗಣಿಸಿ ಅಂಕೀಕರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರ ಧ್ವನಿ ಮತ (ವಾಯ್ಸ್ ವೋಟ್) ಸಹಾಯದಿಂದ ಈ ಮಸೂದೆ ಜಾರಿಗೊಳಿಸಲಾಗಿದ್ದು, ಇನ್ನಷ್ಟು ಬದಲಾವಣೆಯನ್ನು ಕಾಣಲಿದೆ ಎಂದು ನಾಯ್ಡು ಹೇಳಿದ್ದಾರೆ.
ಈ ಬಿಲ್ ರಿಯಲ್ ಎಸ್ಟೇಟ್ ವಲಯದಲ್ಲಿ ಲೆಕ್ಕಕ್ಕೆ ಸಿಗದ ಅನಧಿಕೃತ ಹಣದ ಬಳಕೆಯನ್ನು ನಿರ್ಬಂಧಿಸಲಿದೆ. ಅಲ್ಲದೇ ಶೇ.೭೦ರಷ್ಟು ಹಣದ ಠೇವಣಿನ್ನು ಚೆಕ್ ಮೂಲಕವೇ ಮಾಡಬೇಕು. ನಿರ್ಮಾಣ ಮತ್ತು ಖರೀದಿ ವೆಚ್ಚವನ್ನು ಸರಿದೂಗಿಸಲು ಖರೀದಿದಾರರ ಶೇ.70ರಷ್ಟು ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಮಾಡಲು ಸೂಚಿಸಲಾಗಿದೆ ಎಂದು ನಾಯ್ಡು ಹೇಳಿದ್ದಾರೆ.
ಇದು ವಸತಿ ಮತ್ತು ವಾಣಿಜ್ಯ ವಲಯದ ಯೋಜನೆಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿಯಂತ್ರಣ ಸ್ಥಾಪಿಸಲು ರಾಜ್ಯ ಮಟ್ಟದ ವಸತಿ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳಿಗೆ ಸಹಾಯಕವಾಗಲಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
ನ್ಯಾಯಾಲಯಗಳು ಹಿಂದಿನ 90 ದಿನಗಳ ಬದಲು ೬೦ ದಿನಗಳೊಳಗೆ ಯಾವುದೇ ದಾಖಲಾದ ಕೇಸ್ಗಳಿಗೆ ನ್ಯಾಯ ದೊರಕಿಸಿ ಕೊಡುವ ಹೊಸ ನಿಯಮ ಜಾರಿಯಾಗಿದ್ದು, ನಿಯಂತ್ರಣ ಅಧಿಕಾರಿಗಳು 60 ದಿನಗಳೊಳಗೆ ಬಾಕಿ ಉಳಿದಿರುವ ದೂರುಗಳನ್ನು ಮಂಡಿಸಬೇಕಿದೆ.
ಹಣಕಾಸು ದಂಡ ಪಾವತಿ ಅಥವಾ ಮೇಲ್ಮನವಿ ನ್ಯಾಯಾಲಯಗಳ ನಿಯಮ ಉಲ್ಲಂಘನೆ ಮಾಡಿದಲ್ಲಿ ಪ್ರವರ್ತಕರು 3 ವರ್ಷ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ಗಳು ಮತ್ತು ಖರೀದಿದಾರರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.