ಮುಂಬಯಿ: ಹೊಸದಾಗಿ ರಿಜಿಸ್ಟರ್ಗೊಂಡಿರುವ ಮರಾಠಿಯೇತರರ ಆಟೋರಿಕ್ಷಾಗಳನ್ನು ಸುಟ್ಟು ಹಾಕಿ ಎಂದು ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಈ ಮೂಲಕ ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ.
ಈ ವಿಷಯದಲ್ಲಿ ಬಜಾಜ್ ಆಟೋವನ್ನು ಬೆಂಬಲಿಸುತ್ತಿರುವ ಬಿಜೆಪಿ-ಶಿವಸೇನಾ ಸರ್ಕಾರದ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ.
’ಬಜಾಜ್ ಡೀಲ್ನೊಂದಿಗೆ ಅಪಾರ ಕಿಕ್ಬ್ಯಾಕ್ ನಡೆದಿರುವ ಸಾಧ್ಯತೆ ಇದೆ, ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಕೇವಲ ಲೇಬಲ್ ಮಾತ್ರ ಬದಲಾಗಿದೆ, ಈ ವಿಷಯದಲ್ಲಿ ಕಾಂಗ್ರೆಸ್ಸಿಗರೇ ಬೆಟರ್’ ಎಂದಿದ್ದಾರೆ.
70 ಸಾವಿರ ಹೊಸ ಆಟೋ ರಿಕ್ಷಾಗಳು ನಗರಕ್ಕಿಳಿಯಲಿವೆ, ಈ ರಿಕ್ಷಾಗಳ ಶೇ.70ರಷ್ಟು ಲೈಸೆನ್ಸ್ ಮತ್ತು ಡ್ರೈವರ್ ಬ್ಯಾಡ್ಜ್ಗಳನ್ನು ಹೊರಗಿನವರಿಗೆ ನೀಡಲಾಗಿದೆ, ರಾಜ್ಯ ಸರ್ಕಾರ ನಮ್ಮ ಮರಾಠಿ ಯುವಕ ಯುವತಿಯರನ್ನು ನಿರ್ಲಕ್ಷ್ಯ ಮಾಡುತ್ತಿದೆ.ಇದನ್ನು ವಿರೋಧಿಸುವ ಸಲುವಾಗಿ ಎಂಎನ್ಎಸ್ ಕಾರ್ಯಕರ್ತರು ಮರಾಠಿಗರಲ್ಲದವರ ಆಟೋ ರಿಕ್ಷಾಗಳನ್ನು ಸುಡಬೇಕು ’ ಎಂದಿದ್ದಾರೆ.
ರಾಜಕೀಯ ಕಾರಣಕ್ಕಾಗಿ ಮರಾಠಿಗರನ್ನು ಓಲೈಸಲು ರಾಜ್ ಠಾಕ್ರೆ ಈ ರೀತಿ ಹಿಂಸಾಚಾರ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಹಲವಾರು ಮಂದಿ ಟೀಕಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.