ವಾಷಿಂಗ್ಟನ್: ಎರಡು ಕಂಪ್ಯೂಟರ್ಗಳ ನಡುವೆ ಸಂದೇಶ ಕಳುಹಿಸುವ ಎಲೆಕ್ಟ್ರಾನಿಕ್ ಮೇಲ್ (ಇ-ಮೇಲ್) ಹಾಗೂ @ಚಿನ್ಹೆ ಸಂಶೋಧಕ ರೇಮಂಡ್ ಸ್ಯಾಮುಯೆಲ್ ಟಾಮ್ಲಿನ್ಸನ್ (74) ನಿಧನರಾಗಿದ್ದಾರೆ.
1971ರಲ್ಲಿ ಅವರು ಎರಡು ಕಂಪ್ಯೂಟರ್ಗಳ ನಡುವೆ ಸಂದೇಶ ಕಳುಹಿಸುವ ಇ-ಮೇಲ್ ಸಂಶೋಧನೆ ಮಾಡಿದ್ದರು. ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಗುರುತಿಕೊಳ್ಳಲು @ ಚಿನ್ಹೆಯನ್ನು ಬಳಸುವ ವ್ಯವಸ್ಥೆಯನ್ನು ರೇಮಂಡ್ ಮೊದಲ ಬಾರಿ ಬಳಸಿದ್ದರು.
1967ರಲ್ಲಿ ರೇಮಂಡ್ CPYNET ಪ್ರೋಗ್ರಾಂ ಬರೆದಿದ್ದರು. ನಂತರ ಈ ಪ್ರೋಗ್ರಾಂ ಅನ್ನು SNDMSGಗೆ ಅಳವಡಿಸಿ ಅದರ ಮೂಲಕ ಎರಡು ಕಂಪ್ಯೂಟರ್ಗಳ ನಡುವೆಮೊದಲ ಇ-ಮೇಲ್ ಕಳುಹಿಸಲಾಗಿತ್ತು.
ಅವರ ಈ ಸೋಶೋಧನೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಮೂಲ್ಯ ಪಾತ್ರ ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.