ನವದೆಹಲಿ: ಕಳೆದ 2 ತಿಂಗಳನಿಂದ ನಾಪತ್ತೆಯಾಗಿ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ದೆಹಲಿಗೆ ಬಂದಿಳಿದಿದ್ದಾರೆ.
ಥಾಯ್ ಏರ್ವೇಸ್ ವಿಮಾನದ ಮೂಲಕ ಅವರು ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಯಾವುದೋ ಆಗ್ನೇಯ ಏಷ್ಯಾ ದೇಶದಲ್ಲಿ ಇದ್ದರು. ಅಲ್ಲದೇ ವಿದೇಶದಲ್ಲಿ ಎಸ್ಪಿಜಿ ಭದ್ರತೆಯನ್ನು ಅವರು ನಿರಾಕರಿಸಿದ್ದರು. ಹೀಗಾಗೀ ಅವರಿಗೆ ಅವರಿದ್ದ ದೇಶದ ಭದ್ರತೆಯನ್ನೇ ನೀಡಲಾಗಿತ್ತು.
ಮಯನ್ಮಾರಿನ ಯಾಂಗೋನ್ನಲ್ಲಿನ ಪ್ರಸಿದ್ಧ ಧ್ಯಾನ ಏಕಾಂತ ಕೇಂದ್ರದಲ್ಲಿ ಅವರು ತಂಗಿದ್ದರು ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿಯೇ ಅವರು ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ ಬ್ಯಾಂಕಾಂಕ್ನಿಂದ ವಿಮಾನ ತಡವಾಗಿ ಹೊರಟಿದ್ದರಿಂದ ಆಗಮಿಸುವುದು ತಡವಾಯಿತು ಎನ್ನಲಾಗಿದೆ.
ತಾಯಿ ಸೋನಿಯಾ ಗಾಂಧೀ ಮತ್ತು ಸಹೋದರಿ ಪ್ರಿಯಾಂಕ ಗಾಂಧಿ ರಾಹುಲ್ ನಿವಾಸಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಎ.19ರಂದು ನಡೆಯಲಿರುವ ಬೃಹತ್ ರೈತ ಸಮಾವೇಶದ ನೇತೃತ್ವವನ್ನೂ ಅವರು ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.