ನವದೆಹಲಿ: 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಗೆಗಿನ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ನಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ನಿರ್ಭಯಾ ಅತ್ಯಾಚಾರಿ ಆರೋಪಿಗಳ ಪರ ಇಬ್ಬರು ವಕೀಲರಿಗೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಜಾಗವಿಲ್ಲ, ರೇಪ್ ನಡೆಯಲು ಮಹಿಳೆಯರೇ ಪ್ರಮುಖವಾಗಿ ಕಾರಣರಾಗಿರುತ್ತಾರೆ ಎಂಬಿತ್ಯಾದಿ ಹೇಳಿಕೆಯನ್ನು ಇವರು ಸಾಕ್ಷ್ಯಚಿತ್ರದಲ್ಲಿ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಇವರಿಗೆ ನೋಟಿಸ್ ನೀಡಿದೆ.
ವಕೀಲರಾದ ಎಕೆ ಸಿಂಗ್ ಮತ್ತು ಎಂಎಲ್ ಶರ್ಮರಿಗೆ ನೋಟಿಸ್ ನೀಡಲಾಗಿದೆ. ಇವರು ನಿರ್ಭಯಾ ಅತ್ಯಾಚಾರ ಪ್ರಕರಣ ಆರೋಪಿಗಳ ಡಿಫೆನ್ಸ್ ಲಾಯರ್ಸ್ ಆಗಿದ್ದಾರೆ.
ಸಾಕ್ಷ್ಯಚಿತ್ರದಲ್ಲಿ ಇವರು ನೀಡಿದ ಹೇಳಿಕೆಗೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.
ಇವರ ಹೇಳಿಕೆ ಅಮಾನವೀಯ, ಅಸಮರ್ಥನೀಯ ಮತ್ತು ಮಹಿಳೆಯಲ್ಲಿ ಅಸುರಕ್ಷ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವಂತದ್ದು ಎಂದು ಆರೋಪಿಸಿ ಮಹಿಳಾ ವಕೀಲರ ಅಸೋಸಿಯೇಶನ್ ಸುಪ್ರೀಂಗೆ ಪಿಟಿಷನ್ ಸಲ್ಲಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.