ಇಂಧೋರ್: ಭ್ರಷ್ಟಾಚಾರ ವಿರೋಧಿ ಹೋರಾಟದ ವೇಳೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಸಾಯಲಿ ಎಂದು ಅರವಿಂದ್ ಕೇಜ್ರಿವಾಲ್ ಬಯಸಿದ್ದರು ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ. ಎಎಪಿಯೊಳಗೆ ಭಿನ್ನಮತ ತಲೆದೋರಿರುವ ಸಂದರ್ಭದಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಅಣ್ಣಾ ಹೋರಾಟದ ಕಟ್ಟಾ ಬೆಂಬಲಿಗರಾಗಿದ್ದ ಅಗ್ನಿವೇಶ್ ‘ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿ. ಎಎಪಿಯೊಳಗೆ ಈಗ ಉದ್ಭವವಾಗಿರುವ ಬಿಕ್ಕಟ್ಟಿಗೆ ಅವರೇ ಕಾರಣ. ಯಾರೊಬ್ಬರು ಅವರಿಗಿಂತ ಮುಂದೆ ನಿಲ್ಲುವುದನ್ನು ಅವರು ಬಯಸುವುದಿಲ್ಲ. ಅವರ ಈ ರೀತಿಯ ವರ್ತನೆ ಹೋರಾಟದ ವೇಳೆ ನನ್ನ ಅರಿವಿಗೆ ಬಂದಿದೆ’ ಎಂದಿದ್ದಾರೆ.
‘ಅವರ ವರ್ತನೆಯ ಬಗ್ಗೆ ಪ್ರಶಾಂತ್ ಭೂಷಣ್ ಅವರಿಗೆ ನಾನು ಮೊದಲೇ ಹೇಳಿದ್ದೇ ಆದರೆ ಅವರು ಈ ಬಗ್ಗೆ ಮೌನ ವಹಿಸಿದರು. ಈಗ ಅವರು ಕೇಜ್ರಿವಾಲ್ ವರ್ತನೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಎಎಪಿ ಸಂಪೂರ್ಣ ಭಿನ್ನಾಭಿಪ್ರಾಯಗಳಿಂದ ಒಡೆದು ಹೋಗಿದೆ’ ಎಂದಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದ ವೇಳೆ ಅಣ್ಣಾ ಸಾಯಲಿ, ಅವರ ಸ್ಥಾನಮಾನ ನನ್ನದಾಗಲಿ ಎಂಬ ಆಸೆ ಕೇಜ್ರಿವಾಲ್ಗೆ ಇತ್ತು ಎಂಬುದಾಗಿ ಅಗ್ನಿವೇಶ್ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.