ನವದೆಹಲಿ: 700 ಮಿಲಿಯನ್ ಅಮೆರಿಕನ್ ಮೌಲ್ಯದ ಎಫ್-16 ಫೈಟರ್ ಜೆಟ್ಗಳನ್ನು ಪಾಕಿಸ್ಥಾನಕ್ಕೆ ಮಾರಲು ಅಮೆರಿಕಾ ನಿರ್ಧರಿಸಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಯೋತ್ಪಾದನೆಯನ್ನು ನಿಗ್ರಹಿಸಲು ಅನಕೂಲವಾಗುತ್ತದೆ ಎಂಬ ನೆಪದಲ್ಲಿ ಎಫ್ 16 ಫೈಟರ್ ಜೆಟ್ಗಳನ್ನು ಅಮೇರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದೆ ಎಂದು ಒಬಾಮಾ ಸರ್ಕಾರ ಸರ್ಕಾರ ಹೇಳಿದೆ.
ಈ ಕುರಿತು ವಿದೇಶ ವ್ಯವಹಾರಗಳ ಸಚಿವಾಲಯವು ಭಾರತ ಸರ್ಕಾರಕ್ಕೆ ಈ ವಿಷಯದಲ್ಲಿ ಆಗಿರುವ ಅಸಮಾಧಾನವನ್ನು ಸ್ಪಷ್ಟವಾಗಿ ಟ್ವೀಟ್ ಮಾಡಿದೆ.
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ವಿರೋಧದ ನಡುವೆಯೂ ಅಮೆರಿಕ ಪಾಕಿಸ್ಥಾನದೊಂದಿಗೆ ಫಾರಿನ್ ಮಿಲಿಟರಿ ಸೇಲ್ ಒಪ್ಪಂದ ಮಾಡಿಕೊಂಡು ಎಂಟು ಎಫ್-16 ಫೈಟರ್ ಜೆಟ್ಗಳನ್ನು ಮಾರಲು ನಿರ್ಧರಿಸಿದೆ. ಅಮೇರಿಕಾದ ಈ ನಿಲುವು ಭಾರತಕ್ಕೆ ಅಚ್ಚರಿಯನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.