ನವದೆಹಲಿ: ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಯುಎಇ ಯುವರಾಜ ಅಲ್ ನಹ್ಯನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಹಾರ ಭದ್ರತೆ ಮತ್ತು ಕಚ್ಚಾ ತೈಲ ಸಂಗ್ರಹಣೆ ಕುರಿತು ರಾಷ್ಟ್ರಪತಿ ಭವನದಲ್ಲಿ ಚರ್ಚೆ ನಡೆಸಿದ್ದಾರೆ.
ಭಾರತದಂದ ಆಹಾರ ಆಮದು ಮಾಡಿಕೊಳ್ಳಲು ಯುಎಇ ಪ್ರಸ್ತಾಪಿಸಿದೆ. ಅಲ್ಲದೆ ದೇಶದ 2.6 ಮಿಲಿಯನ್ ಭಾರತೀಯರ ಅಭಿವೃದ್ಧಿಗೆ ಭಾರತದ ಕೊಡುಗೆಯನ್ನು ಪ್ರಸ್ತಾಪಿಸಿದೆ.
ಯುಎಇ 2/3ರಷ್ಟು ತೈಲವನ್ನು ಉಚಿತವಾಗಿ ನೀಡಲು ಮುಂದಾಗಿದ್ದು, ಮಂಗಳೂರು, ಉಡುಪಿ ಜಿಲ್ಲೆಯ ಪಾದೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ೫.೩೩ ದಶಲಕ್ಷ ಟನ್ ಕಚ್ಚಾ ತೈಲ ತುಂಬಿಡುವ ಸಂಗ್ರಹಾಗಾರ ಹೊಂದಿದೆ.
ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್, ಮಂಗಳೂರಿನಲ್ಲಿ 1.5 ದಶಲಕ್ಷ ಟನ್ ಮತ್ತು ಪಾದೂರಿನಲ್ಲಿ 2.5 ದಶಲಕ್ಷ ಟನ್ ಸಂಗ್ರಹಿಸಲಿದ್ದು, ಭಾರತಕ್ಕೆ 5 ಲಕಷ ಟನ್ ಉಚಿತವಾಗಿ ನೀಡಲಿದೆ.
ಭಾರತ ಮತ್ತು ಯುಎಈ ನಡುವೆ ಮುಂದಿನ 5 ವರ್ಷಗಳಿಗೆ ಶೇ.60ರಷ್ಟು ದ್ವಿಪಕ್ಷೀಯ ವ್ಯಾಪಾರದ ಬಗೆಯೂ ಈ ವೇಳೆ ಚರ್ಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.