ಮುಂಬಯಿ: 25 ವರ್ಷಗಳ ಹಿಂದೆ ಬಲವಂತವಾಗಿ ತಮ್ಮ ರಾಜ್ಯ ತೊರೆದಿರುವ ಕಾಶ್ಮೀರಿ ಪಂಡಿತರಿಗೆ ಗೌರವಪೂರಕವಾಗಿ, ಸಮಂಜಸವಾಗಿ ಜಮ್ಮುಕಾಶ್ಮೀರದಲ್ಲಿ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.
‘ಜಮ್ಮು ಕಾಶ್ಮೀರದಲ್ಲಿ ಈಗ ಬಿಜೆಪಿ ಮತ್ತು ಪಿಡಿಪಿ ನೇತೃತ್ವದ ಸ್ಥಿರ ಸರ್ಕಾರವಿದೆ. ಕೇಂದ್ರದಲ್ಲಿ ಬಲಿಷ್ಠ ನರೇಂದ್ರ ಮೋದಿ ಸರ್ಕಾರವಿದೆ. ಹೀಗಾಗಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಕಾಶ್ಮೀರಿ ಪಂಡಿತರ ‘ಘರ್ ವಾಪಸಿ’ಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕು’ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
‘ಪ್ರತ್ಯೇಕತವಾದಿಗಳನ್ನು ಬಿಡುಗಡೆ ಮಾಡಿದ ಮುಫ್ತಿಯವರ ಕ್ರಮ ಅವರ ಸರ್ಕಾರದ ಮೇಲೆ ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ’ ಎಂದಿದೆ.
ಅಲ್ಲದೇ ಮುಸ್ಲಿಂ ಮತದಾನದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದು, ಕಳೆದ ಬಾರಿ ನಡೆದ ಜಮ್ಮು ಕಾಶ್ಮೀರದ ಚುನಾವಣೆಯಲ್ಲಿ ಎಷ್ಟು ಮಂದಿ ಕಾಶ್ಮೀರಿ ಪಂಡಿತರಿಗೆ ಮತದಾನ ಮಾಡುವ ಅವಕಾಶ ಸಿಕ್ಕಿದೆ ಎಂದು ಪ್ರಶ್ನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.