ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾನ ಮಾಡಿದ್ದ ಫೇಸ್ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಇದೀಗ ತಾನು ಮಾಡಿದ ಟ್ವಿಟ್ನ್ನು ಅಳಿಸಿ, ಭಾರತದ ಕ್ಷಮೆಯಾಚನೆ ಮಾಡಿದ್ದಾನೆ.
ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ ಉತ್ತಮವಾಗಿತ್ತು ಎಂಬ ಹೇಳಿಕೆ ನೀಡಿದ್ದ.
ತಾರತಮ್ಯದ ಇಂಟರ್ನೆಟ್ ದರಕ್ಕೆ ಭಾರತ ವಿರೋಧ ವ್ಯಕ್ತಪಡಿಸಿರುವುದು ’ಕೊಲೊನಿಯಲಿಸ್ಟ್ ವಿರೋಧಿ’ ಎಂದಿರುವ ಈತ, ಭಾರತೀಯರು ಮತ್ತೊಮ್ಮೆ ಆರ್ಥಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು.
ಆತನ ಈ ಹೇಳಿಕೆಗೆ ಟ್ವಿಟರ್ ಮೂಲಕ ಹಲವಾರು ಭಾರತೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೂ ಎಚ್ಚೆತ್ತುಕೊಂಡಿರುವ ಆತ ಇದೀಗ ಕ್ಷಮೆಯಾಚನೆ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.