ನವದೆಹಲಿ: ಸಿಯಾಚಿನ್ನಲ್ಲಿ ಹಿಮಪಾತಕ್ಕೆ 10ಯೋಧರು ಮೃತಪಟ್ಟಿರುವುದು ಅತೀವ ನೋವುಂಟು ಮಾಡಿದೆ ಎಂದಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭದ್ರತಾ ಕಾರಣಗಳಿಗಾಗಿ ಯೋಧರನ್ನು ಅಲ್ಲಿ ನೇಮಕಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
‘ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಪಡೆಗಳನ್ನು ನಿಯೋಜಿಸುವುದು ದೇಶದ ಭದ್ರತೆಗೆ ಅನಿವಾರ್ಯ. ಯಾರದರು ಅಲ್ಲಿಗೆ ಹೋಗಬೇಕೆಂದು ಬಯಸಿದರೆ ಮೊದಲು ಅವರು ಅಲ್ಲಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು’. ಎಂದಿದ್ದಾರೆ.
‘ನಮಗಾಗಿ ಕರ್ತವ್ಯ ಮಾಡುವ ಯೋಧರ ಅಗಲುವಿಕೆ ನನ್ನನ್ನು ವಿಚಲಿತಗೊಳಿಸುತ್ತದೆ. ಸಿಯಾಚಿನ್ನಲ್ಲಿ ಪ್ರಾಣತ್ಯಾಗ ಮಾಡಿದ ವಿಷಯ ನನಗೆ ವೈಯಕ್ತಿವಾಗಿ ತೀವ್ರ ನೋವುಂಟು ಮಾಡಿದೆ’ ಎಂದಿದ್ದಾರೆ.
ಸೌಲಭ್ಯ, ಸಲಕರಣೆ ಮತ್ತು ತರಬೇತಿಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸಿಯಾಚಿನ್ನಲ್ಲಿನ ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.