ಟ್ರಾಲ್: ಭಯೋತ್ಪಾದಕರು ಮತ್ತು ಸೇನೆ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯುವಕನೊಬ್ಬನ ಹತ್ಯೆಯಾಗಿರುವುದನ್ನು ಖಂಡಿಸಿ ದಕ್ಷಿಣ ಕಾಶ್ಮೀರದ ಟ್ರಾಲ್ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ವೇಳೆ ಪ್ರತ್ಯೇಕತಾವಾದಿ ನಾಯಕರಾದ ಯಾಸೀನ್ ಮಲಿಕ್ ಮತ್ತು ಅಸರತ್ ಆಲಂನನ್ನು ಬಂಧಿಸಲಾಗಿದೆ.
ಪ್ರತಿಭಟನೆಯ ವೇಳೆ ಸಿಆರ್ಪಿಎಫ್ ಯೋಧನ ಎಕೆ 47 ರೈಫಲನ್ನು ಪ್ರತಿಭಟನಾಕಾರರು ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವಕನನ್ನು ಯೋಧರು ನಕಲಿ ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಎಂದು ಆತನ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಆದರೆ ಆತನಿಗೆ ಉಗ್ರರ ಸಂಪರ್ಕವಿತ್ತು ಮತ್ತು ಆತ ಹಿಜ್ಬುಲ್ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಎ.13ರಂದು ಕಮ್ಲಾ ಅರಣ್ಯದಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯ ವೇಳೆ ಈತ ಗುಂಡೇಟಿಗೆ ಬಲಿಯಾಗಿದ್ದಾನೆ. ಈತನ ಮೃತದೇಹದ ಬಳಿ ರೈಫಲ್ ಸಿಕ್ಕಿತ್ತು, ಬಳಿಕ ಈತನನ್ನು ಹಿಜ್ಬುಲ್ ಸಂಘಟನೆಯ ಕಮಾಂಡರ್ ಬುರ್ಹಾನ್ನ ಸಹೋದರ ಖಲೀದ್ ವಾನಿ ಎಂದು ಗುರುತಿಸಲಾಯಿತು. ಈತನ ಬಳಿಯಿದ್ದ ಎಕೆ 47 ರೈಫಲ್ 2014ರ ಆ.8ರಂದು ಪೊಲೀಸ್ ಸ್ಟೇಶನ್ನಿನಿಂದ ಕದ್ದದ್ದು ಎಂದು ತಿಳಿದು ಬಂತು ಎಂದು ಸೇನೆ ಪ್ರಕಟನೆಯಲ್ಲಿ ತಿಳಿಸಿದೆ.
ಇದೇ ವೇಳೆ ಇತರ ಮೂವರು ಯುವಕರನ್ನು ಬಂಧಿಸಿರುವುದಾಗಿಯೂ ಸೇನೆ ಹೇಳಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ ಹತ್ಯೆಯನ್ನು ಖಂಡಿಸಿ ಕಣಿವೆ ರಾಜ್ಯದಲ್ಲಿ ಉಗ್ರಸ್ವರೂಪದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ತೆರಳುತ್ತಿದ್ದ ಪ್ರತ್ಯೇಕತಾವಾದಿ ಮುಖಂಡರನ್ನು ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.