ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಔತಣಕೂಟ ಸಮಾರಂಭಕ್ಕೆ ಉತ್ತಮ ಶೂಗಳನ್ನು ಧರಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವ್ಯಕ್ತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ವಿಶಾಖಪಟ್ಟಣಂನ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಸುಮಿತ್ ಅಗರ್ವಾಲ್ ಎಂಬಾತ ಕೇಜ್ರಿವಾಲ್ ಹೊಸ ಚಪ್ಪಲಿಯನ್ನು ಖರೀದಿಸಲಿ ಎಂಬ ಕಾರಣಕ್ಕೆ 364 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಕಳುಹಿಸಿಕೊಟ್ಟಿದ್ದಾನೆ.
ಅಲ್ಲದೇ ಈ ರೀತಿ ಕಿತ್ತು ಹೋದ ಚಪ್ಪಲ್ ಧರಿಸಿ ಭಾರತದ ಘನತೆಗೆ ಧಕ್ಕೆಯುಂಟು ಮಾಡಬೇಡಿ ಎಂದು ಆತ ಅವರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾನೆ. ಅಲ್ಲದೇ ದೆಹಲಿ ಸರ್ಕಾರ ತನ್ನ ಉದ್ಯೋಗಿಗಳಿಗೆ ಉತ್ತಮ ಚಪ್ಪಲಿಯನ್ನೂ ನೀಡಲು ವಿಫಲವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ.
ಗಣರಾಜ್ಯೋತ್ಸವದ ಔತಣಕೂಟದಲ್ಲಿ ವಿದೇಶಗಳ ಹಲವಾರು ಗಣ್ಯರು ಭಾಗವಹಿಸಿದ್ದರು, ಈ ವೇಳೆ ಕೇಜ್ರಿವಾಲ್ ಕಳಪೆ ಚಪ್ಪಲ್ ಧರಿಸಿ ಭಾರತದ ಘನತೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬುದು ಅಗರ್ವಾಲ್ ಆರೋಪ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.