ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಭಾರತದ ’ಸಂವಿಧಾನ ಶಿಲ್ಪಿ’ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ‘ಜನ್ಮದಿನದ ಪ್ರಯುಕ್ತ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಮನಗಳು. ಜೈ ಭೀಮ್’ ಎಂದಿದ್ದಾರೆ.
‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಯುಗಪುರುಷ. ಕೋಟ್ಯಾಂತರ ಭಾರತೀಯ ಮನಸ್ಸು ಮತ್ತು ಹೃದಯದಲ್ಲಿ ಅವರು ನೆಲೆಸಿದ್ದಾರೆ. ಸಾಮಾಜಿಕ ನ್ಯಾಯದ ಕಡೆಗೆ ಅವರಿಗಿದ್ದ ಬದ್ಧತೆಗೆ ಹೋಲಿಕೆಯೇ ಇಲ್ಲ, ಪ್ರಖರ ವಕೀಲನಾಗಿ, ತತ್ವಜ್ಞಾನಿಯಾಗಿ, ಬರಹಗಾರನಾಗಿ ಅವರು ಅತ್ಯುತ್ತಮ ಮೈಲಿಗಲ್ಲು ಸಾಧಿಸಿದ್ದಾರೆ’ ಎಂದಿದ್ದಾರೆ.
ಅಲ್ಲದೇ ‘ಭಾರತೀಯ ಸಂವಿಧಾನವನ್ನು ರೂಪಿಸುವಲ್ಲಿನ ಅಂಬೇಡ್ಕರ್ ಅವರ ಕೊಡುಗೆಯನ್ನು ಯಾರು ತಾನೆ ಮರೆಯಲು ಸಾಧ್ಯ. ಈ ದೇಶಕ್ಕಾಗಿ, ಜನರಿಗಾಗಿ ಅವರು ನಿಸ್ವಾರ್ಥ, ಅವಿರತ ಶ್ರಮವಹಿಸಿ ಸೇವೆ ಮಾಡಿದ್ದಾರೆ. ಅಂಬೇಡ್ಕರ್ರ ಕನಸಿನ ಭಾರತವನ್ನು ನಿರ್ಮಿಸಲು ನಮ್ಮನ್ನು ನಾವು ಮುಡಿಪಾಗಿಡೋಣ’ ಎಂದರು.
ಅಂಬೇಡ್ಕರ್ ಜಯಂತಿಯ ಹಿನ್ನಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸಭೆ ಸಮಾರಂಭಗಳನ್ನು ಏರ್ಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.