ನವದೆಹಲಿ: ತನಗೆ ಪತ್ರ ಬರೆದು ಸಲಹೆ ಸೂಚನೆಗಳನ್ನು ದೂರುಗಳನ್ನು ನೀಡಿ ಎಂದು ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ದೇಶದ ಜನತೆಗೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿ ಮಕ್ಕಳು ದೊಡ್ಡವರು ಎನ್ನದೆ ಹಲವಾರು ಮಂದಿ ಪತ್ರ ಬರೆದಿದ್ದಾರೆ. ಅವರನ್ನು ಎಂದೂ ಮೋದಿ ನಿರಾಸೆಗೊಳಿಸಿಲ್ಲ.
ಉತ್ತರಪ್ರದೇಶ ಕಾನ್ಪುರದ ಉನ್ನೋ ಪ್ರದೇಶದ 11 ವರ್ಷ ಬಾಲಕನೊಬ್ಬ ರೈಲ್ವೇ ಟ್ರ್ಯಾಕ್ನಲ್ಲಿ ಕ್ರಾಸಿಂಗ್ ಇಲ್ಲದೇ ಶಾಲೆಗೆ ಹೋಗಲು ತಾನು ಮತ್ತು ತನ್ನಂತ 200 ಮಕ್ಕಳು ನಿತ್ಯ ನಡೆಸುತ್ತಿರುವ ಪರದಾಟದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾನೆ. ಇದಕ್ಕೆ ಆತನಿಗೆ ಪ್ರಧಾನಿಯಿಂದ ಸಿಕ್ಕಿದ ಪ್ರತಿಕ್ರಿಯೆ ನಿಜಕ್ಕೂ ನಂಬಲಸಾಧ್ಯ.
ನಯನ್ ಸಿಂಗ್ ಎಂಬ ವಿದ್ಯಾರ್ಥಿ ಈ ಪತ್ರವನ್ನು ಪ್ರಧಾನಿಗೆ ಬರೆದಿದ್ದ, ಆದರೆ ಈ ಬಗ್ಗೆ ಸ್ನೇಹಿತರಿಗಾಗಲಿ, ಕುಟುಂಬಕ್ಕಾಗಲಿ ಮಾಹಿತಿಯನ್ನೇ ಆತ ನೀಡಿರಲಿಲ್ಲ. ಆದರೆ ಯಾವಾಗ ಈತನ ಕುಟುಂಬ ಉತ್ತರ ರೈಲ್ವೇಯ ಡಿವಿಜನಲ್ ಎಂಜಿನಿಯರ್ರಿಂದ ಪತ್ರವನ್ನು ಪಡೆಯಿತೋ ಆಗಲೇ ಆತ ಮೋದಿಗೆ ಬರೆದ ಪತ್ರದ ಬಗ್ಗೆ ಎಲ್ಲರಿಗೂ ತಿಳಿಯಿತು.
ಪತ್ರದಲ್ಲಿ ಈತ ಮೋದಿಗೆ ಪತ್ರ ಮುಖೇನ ಸಲ್ಲಿಸಿದ ದೂರಿನ ವಿವರ ಹಾಗೂ ಸಮಸ್ಯೆಯನ್ನು ನಿವಾರಿಸುವ ಭರವಸೆಯನ್ನು ನೀಡಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದರೆ ಮಾತ್ರ ಕ್ರಾಸಿಂಗ್ ಸ್ಥಾಪನೆ ಸಾಧ್ಯ ಎಂಬುದನ್ನು ಹೇಳಲಾಗಿತ್ತು.
ಅದೇನೆಯಿರಲಿ ನಯನ್ ಪತ್ರದಿಂದಾಗಿ ಉನ್ನೋದಲ್ಲಿ ಶೀಘ್ರವೇ ಕ್ರಾಸಿಂಗ್ ಸ್ಥಾಪನೆಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳು ಆರಂಭವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.