ಬೆಂಗಳೂರು: ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ಲಾಸ್ಟಿಕ್ ಚೀಲಗಳು ಸಂಪೂರ್ಣವಾಗಿ ನಿಷೇಧವಾಗಲಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಉತ್ಪಾದಿಸಲು ಯೋಚಿಸುತ್ತಿದೆ.
ಜವಳಿ ಇಲಾಖೆ ತನ್ನ ಪ್ರಿಯದರ್ಶಿನಿ ಕೇಂದ್ರಗಳಲ್ಲಿ 2013ರಿಂದ ಈಚೆಗೆ 1 ಲಕ್ಷ ಬಟ್ಟೆ ಚೀಲಗಳನ್ನು ಮಾರಾಟ ಮಾಡಿದೆ. ಇನ್ನಷ್ಟು ಬಟ್ಟೆಗಳನ್ನು ತಯಾರಿಸಲು ಸರ್ಕಾರದಿಂದ ಧನ ಸಹಾಯ ನೀಡುವಂತೆ ಕೇಳಿಕೊಳ್ಳಲು ಇಲಾಖೆ ಯೋಚಿಸಿದೆ. ಈ ಬಟ್ಟೆ ಚೀಲಗಳ ಬೇಡಿಕೆ ನಿರ್ಣಯಿಸಲು ಸಮೀಕ್ಷೆ ನಡೆಸಲಿದೆ ಎಂದು ಕೈಮಗ್ಗ ಮತ್ತು ಜವಳಿ ಇದರ ಜವಳಿ ಅಭಿವೃದ್ಧಿ ನಿದೇಶಕ ಆರ್. ರಾಜು ತಿಳಿಸಿದ್ದಾರೆ.
ಮಾರ್ಚ್ 21, 2013ರಂದು ಸರ್ಕಾರ ಪ್ಲಾಸ್ಟಿಕ ನಿಷೇಧಿಸುವಂತೆ ಹಾಗೂ ಬಟ್ಟೆ ಚೀಲಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಅಧಿಸೂಚನೆ ಜಾರಿಗೊಳಿಸಿತ್ತು. ಅಲ್ಲದೇ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಕೈಮಗ್ಗ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆಗೆ ಬಟ್ಟೆ ಚೀಲಗಳನ್ನು ತಯಾರಿಸಲು, ಪ್ರೋತ್ಸಾಹಿಸಲು ಮತ್ತು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಆದೇಶಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.