ನವದೆಹಲಿ: 67 ವರ್ಷಗಳಲ್ಲಿ ಮೊದಲ ಬಾರಿಗೆ ದೆಹಲಿ ಪೊಲೀಸ್ ಬ್ಯಾಂಡ್ ರಾಜಪಥದಲ್ಲಿ ಶುಕ್ರವಾರ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಇಂಡೋ-ಟಿಬೆಟ್ ಗಡಿ ಪಡೆಯ ದತ್ತದಳದೊಂದಿಗೆ ಸಮರ ರಾಗ(Martial Tunes)ಗಳನ್ನು ನುಡಿಸಲಿವೆ ಎಂದು ತಂಡದ ಮುಖ್ಯಸ್ಥ ಜಗಜೀತ್ ಪ್ರಸಾದ್ ತಿಳಿಸಿದ್ದಾರೆ.
37 ಸದಸ್ಯರ ತಂಡ ಇಲ್ಲಿಯ ಚಾವ್ಲಾದಲ್ಲಿರುವ ಬಿಎಸ್ಎಫ್ ಶಿಬಿರದಲ್ಲಿ 5 ನಿಮಿಷಗಳ ಪಥಸಂಚಲನಕ್ಕಾಗಿ ಅಭ್ಯಾಸ ನಡೆಸಿದೆ. ಓರ್ವ ಅಧಿಕಾರಿಯ ನೇತೃತ್ವದಲ್ಲಿ ಈ ಸಂಚಲನ ನಡೆಯಲಿದೆ. ರಾಜಪಥದಿಂದ ಆರಂಭಗೊಂಡು ವಿಜಯ್ ಚೌಕ್ ವರೆಗೆ 2 ಪ್ರತ್ಯೇಕ ಸಾಲುಗಳಲ್ಲಿ ತಂಡವು ಸಂಚಲನ ನಡೆಸಲಿದ್ದು, 3 ಸಂಚಲನ ರಾಗಗಳಾದ ಸ್ವಾಧೀನ, ಅಭಿನಂದನ್ ಮತ್ತು ಕರುಪ್ಪರ್ಗಳನ್ನು ನುಡಿಸಲಿದೆ.
84 ಸದಸ್ಯರನ್ನು ಒಳಗೊಂಡ ಪೊಲೀಸ್ ಬ್ಯಾಂಡ್ ಕೆಂಪು ಕೋಟೆಯಲ್ಲಿ ನಡೆಯುವ ರೈಸಿಂಗ್ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ಔಪಚಾರಿಕವಾಗಿ ಭಾಗವಹಿಸುತ್ತದೆ.
ಗಣರಾಜ್ಯೋತ್ಸವ ಹಾಗೂ ಬೀಟಿಂಗ್ ರಿಟ್ರೀಟ್ ಸಮಾರಂಭಗಳಿಗಾಗಿ ತಂಡವು ಯೂಫೋನಿಯಮ್, ಇಬಿ ಬಾಸ್, ಇಬಿ ಹಾರ್ನ್, ಆಲ್ಟೋ ಸ್ಯಾಕ್ಸೋಫೋನ್ಬಿಬಿ ಕ್ಲಾರಿನೆಟ್ ಇತ್ಯಾದಿ ಹೊಸ ಉಪಕರಣಗಳನ್ನು ಖರೀದಿಸಿದೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ಹಾಗೂ ತಂಡದ ಸದಸ್ಯ ಪುರುಷೋತ್ತಮ್ ಬಹದ್ದೂರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.