ನವದೆಹಲಿ: ಜಗತ್ತಿನ ಯಾವುದೇ ದೇಶವೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಆದರೂ ಜನರು ಒಗ್ಗಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ, ಇದರಲ್ಲಿ ಕೆಲ ದೇಶಗಳು ತಕ್ಕ ಮಟ್ಟಿನ ಯಶಸ್ಸನ್ನೂ ಕಾಣುತ್ತಿದ್ದರೆ, ಕೆಲವೊಂದು ದೇಶಗಳು ಕಳಪೆ ಸಾಧನೆಯನ್ನು ಮಾಡುತ್ತಿದೆ.
ಟ್ರಾನ್ಸ್ಪೆರನ್ಸಿ ಇಂಟರ್ನ್ಯಾಷನಲ್ಸ್ ಕರಪ್ಷನ್ ಪರ್ಸೆಪ್ಷನ್ಸ್ ಇಂಡೆಕ್ಸ್ನಲ್ಲಿ 168 ದೇಶಗಳ ಸಾರ್ವಜನಿಕ ವಲಯಗಳ ಭ್ರಷ್ಟಾಚಾರದ ಪಟ್ಟಿಯನ್ನು ನೀಡಲಾಗಿದೆ.
ಭಾರತ ಈ ಪಟ್ಟಿಯಲ್ಲಿ ಹಿಂದೆ ಎಲ್ಲಿತ್ತೋ ಈಗಲೂ ಅಲ್ಲೇ ಇದೆ. 2014ರಲ್ಲಿ 28 ಅಂಕ ಪಡೆದು 76ನೇ ಸ್ಥಾನದಲ್ಲಿತ್ತು. ೨೦೧೫ರ ಪಟ್ಟಿಯಲ್ಲೂ ಅಲ್ಲೇ ಇದೆ. ಈ ಪಟ್ಟಿಯಲ್ಲಿ ಕಳಪೆ ಸಾಧನೆ ಮಾಡಿದ ದೇಶವೆಂದರೆ ಬ್ರೆಝಿಲ್, ಇದು 7 ಪಾಯಿಂಟ್ ಕುಸಿತ ಕಂಡು 76ನೇ ಸ್ಥಾನ ಪಡೆದಿದೆ.
37 ಪಾಯಿಂಟ್ ಪಡೆದು ಚೀನಾ 83ನೇ ಸ್ಥಾನದಲ್ಲಿದೆ, 29 ಪಾಯಿಂಟ್ ಪಡೆದು ರಷ್ಯಾ 119ನೇ ಸ್ಥಾನದಲ್ಲಿದೆ.
ಸತತ ಎರಡನೇ ಬಾರಿಗೆ ಡೆನ್ಮಾರ್ಕ್ ಭ್ರಷ್ಟಚಾರ ರಹಿತ ದೇಶವಾಗಿ ಹೊರಹೊಮ್ಮಿದೆ, ಉತ್ತರ ಕೊರಿಯಾ ಮತ್ತು ಸೊಮಾಲಿಯಾ ಅತೀ ಭ್ರಷ್ಟ ದೇಶವಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.