ನವದೆಹಲಿ: ಕ್ಲಿಯರ್ಟ್ರಿಪ್, ಪೇಟಿಎಂ, ಝೋಮ್ಯಾಟೊ ಸೇರಿದಂತೆ ಹಲವಾರು ಸ್ಟಾರ್ಟ್ಅಪ್ ಸ್ಥಾಪಕರು ಯಾವುದೇ ಪಕ್ಷಪಾತವಿಲ್ಲದೇ ಇಂಟರ್ನೆಟ್ ಪ್ರವೇಶಿಸುವ ನೆಟ್ ನ್ಯೂಟ್ರಾಲಿಟಿಗೆ ಸಹಕರಿಸಿ ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮ ನೆಟ್ ನ್ಯೂಟ್ರಾಲಿಟಿ ಬಗ್ಗೆ ಸ್ಪಷ್ಟವಾದ ನೀತಿ, ನಿಯಮಗಳೊಂದಿಗೆ ಕಾಳಜಿ ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಕಂಪೆನಿಯ ಸ್ಥಾಪಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಝೋಮ್ಯಾಟೊ ಸ್ಥಾಪಕ ದೀಪಿಂದರ್ ಗೋಯಲ್, ಕ್ಲಿಯರ್ಟ್ರಿಪ್ ಸ್ಥಾಪಕ ಋಷ್ ಭಟ್ ಸೇರಿದಂತೆ 500 ಜನರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇಂಟರ್ನೆಟ್ ಬಳಕೆದಾರರು ತಮ್ಮ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ಸಂಪರ್ಕ ಹೊಂದಬಹುದು. ನೆಟ್ ನ್ಯೂಟ್ರಾಲಿಟಿ ನಿಯಮಗಳಲ್ಲಿ ಯಾವುದೇ ಉಲ್ಲಂಘನೆ ಆದಲ್ಲಿ ವಿಶ್ವದ ಸ್ಟಾರ್ಟ್ಅಪ್ಗಳ ಆಸಕ್ತಿಯನ್ನು ಕ್ಷೀಣಿಸಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.