ನವದೆಹಲಿ: ಭಾರತದ ವಿರುದ್ಧ ಸಮರ ಸಾರಲು ಹವಣಿಸುತ್ತಿರುವ ಇಸಿಸ್ ಉಗ್ರ ಸಂಘಟನೆ ಒಂದಲ್ಲಾ ಒಂದು ರೀತಿಯಲ್ಲಿ ಭಾರತವನ್ನು ಟಾರ್ಗೆಟ್ ಮಾಡುತ್ತಿದೆ. ಭಾರತೀಯ ಸರ್ಕಾರದ ಸೂಕ್ಷ್ಮ ದಾಖಲೆಗಳನ್ನು ಕದಿಯುವ ಪ್ರಯತ್ನವನ್ನೂ ಮಾಡುತ್ತಿದೆ ಎಂಬ ಮಾಹಿತಿಗಳೂ ಇವೆ.
ಭಾರತ ಸರ್ಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ, ಅವುಗಳಲ್ಲಿನ ರಹಸ್ಯ ಮಾಹಿತಿಗಳನ್ನು ನೀಡುವ ಭಾರತೀಯ ಹ್ಯಾಕರ್ಗಳಿಗೆ 10 ಸಾವಿರ ಡಾಲರ್ಗಳನ್ನು ನೀಡಲು ಇಸಿಸ್ ಮುಂದಾಗಿದೆ ಎನ್ನಲಾಗಿದೆ,
‘ಹ್ಯಾಕರ್ಗಳು ನಿರಂತರ ಸಂಪರ್ಕದಲ್ಲಿರುವ ಅಂಡರ್ಗ್ರೌಂಡ್ ಕಮ್ಯೂನಿಟಿ ಆನ್ಲೈನ್ಗಳಿವೆ, ನಮಗೆ ಬಂದ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಿನಿಂದ ಭಾರತೀಯ ಸರ್ಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಆಫರ್ಗಳನ್ನು ನೀಡಲಾಗುತ್ತಿದೆ, ಅವರಿಗೆ ಅಪಾರ ಪ್ರಮಾಣದ ಹಣದ ಆಮಿಷವೊಡ್ಡಲಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಹಣದ ಆಫರ್ ಭಾರತೀಯ ಹ್ಯಾಕರ್ಗಳಿಗೆ ಇದುವರೆಗೆ ಬಂದಿಲ್ಲ. ಇಸಿಸ್ ಸಂಘಟನೆ ಭಾರತದಲ್ಲಿ ಹರಡಲು ಈ ಆಫರ್ಗಳನ್ನು ನೀಡಲಾಗುತ್ತುದೆ’ ಎಂದು ಸೈಬರ್ ಅಪರಾಧ ತಜ್ಞ ಕಿಸ್ಲೇ ಚೌಧರಿ ತಿಳಿಸಿದ್ದಾರೆ.
ಇಸಿಸ್ ಪ್ರಭಾವಕ್ಕೆ ಒಳಗಾಗಿರುವ ಕೆಲವರು ಈಗಾಗಲೇ ಈ ಆಫರ್ನ್ನು ಸ್ವೀಕರಿಸಿದ್ದಾರೆ ಎಂದೂ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.