ಮುಂಬಯಿ: ತಂತ್ರಜ್ಞಾನ ದೈತ್ಯ ಗೂಗಲ್ ಇಂಡಿಯಾ ಹಾಗೂ ಭಾರತೀಯ ರೈಲ್ವೆಯ ರೈಲ್ಟೆಲ್ ಸಹಯೋಗದೊಂದಿಗೆ ಸಾರ್ವಜನಿಕ ಹೈ-ಸ್ಪೀಡ್ ಉಚಿತ ವೈಫೈ ಸೇವೆಗೆ ಮುಂಬೈಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ. ಮುಂಬಯಿ ನಿಲ್ದಾಣವು ಇಂತಹ ಸೌಲಭ್ಯ ಪಡೆದ ದೇಶದ ಮೊದಲ ನಿಲ್ದಾಣವಾಗಿದೆ.
ಇದೊಂದು ’ವಿಶ್ವ ದರ್ಜೆ’ಯ ಸೌಲಭ್ಯವಾಗಿದೆ ಎಂದು ಬಣ್ಣಿಸಿದ ಪ್ರಭು, ವರ್ಷಾತ್ಯದೊಳಗೆ ದೇಶದ ಅತಿ ದಟ್ಟಣೆಯ 100 ರೈಲ್ವೆ ನಿಲ್ದಾಣಗಳು ಉಚಿತ ಸಾರ್ವಜನಿಕ ವೈಫೈ ಸೇವೆ ಅಡಿಯಲ್ಲಿ ಬರಲಿದೆ. ವಿಶ್ವದ ಅತಿದೊಡ್ಡ ಯೋಜನೆಯಾಗಿ ಮಾಡಲಾಗುವುದು ಹೇಳಿದ್ದಾರೆ.
ಗೂಗಲ್ ಇಂಡಿಯಾ ಹಾಗೂ ಭಾರತೀಯ ರೈಲ್ವೆ ಸಹಭಾಗಿತ್ವದಲ್ಲಿ ಮೊದಲ ಹೆಜ್ಜೆಯಾಗಿ ಹೈ-ಸ್ಪೀಡ್ ಸಾರ್ವಜನಿಕ ವೈಫೈ ಸೇವೆ ಆರಂಭಿಸಿರುವುದು ಸಂತಸ ತಂದಿದೆ. ಜನರು ಇಂಟರ್ನೆಟ್ ಸುಲಭವಾಗಿ ಪ್ರವೇಶಿಸಲು ಇದೊಂದು ಉಪಯುಕ್ತ ಮತ್ತು ಪ್ರಮುಖ ಭಾಗವಾಗಿದೆ. ದೇಶದ 100 ಪ್ರಮುಖ ನಿಲ್ದಾಣಗಳಲ್ಲಿ ಒಂದು ಕೋಟಿ ಜನರು ವೈಫೈ ಸೇವೆಯನ್ನು ಆನಂದಿಸಲಿದ್ದಾರೆ ಎಂದು ಗೂಗಲ್ ಸೌತ್ ಈಸ್ಟ್ ಏಷ್ಯಾ ಎಂಡ್ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ಹೇಳಿದ್ದಾರೆ.
ಅಲಹಾಬಾದ್, ಜೈಪುರ, ಪಾಟ್ನಾ ಹಾಗೂ ರಾಂಚಿಗಳಲ್ಲಿ ಅತಿ ಶೀಘ್ರದಲ್ಲೇ ವೈಫೈ ಸೇವೆ ಒದಗಿಸಲಾಗುವುದು ಎಂದು ಗೂಗಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.