ನ್ಯೂಯಾರ್ಕ್: ಗಣಿತ ಸಿದ್ಧಾಂತ, ಕ್ಯಾನ್ಸರ್ ಲಸಿಕೆ ಮೊದಲಾದ ಉನ್ನತ ಮಟ್ಟದ ಯೋಜನೆಗಳ ೧ ಮಿಲಿಯನ್ ಡಾಲರ್ ಬಹುಮಾದ ಪ್ರತಿಷ್ಠಿತ ಇಂಟೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಸ್ಪರ್ಧೆಗೆ 14 ಅನಿವಾಸಿ ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಇಂಟೆಲ್ ಕಾರ್ಪೋರೇಶನ್ ಪ್ರಾಯೋಜಕತ್ವದ ಹಾಗೂ ಸೊಸೈಟಿ ಫಾರ್ ಸೈನ್ಸ್ ಎಂಡ್ ಆಂಪ್ ನಡೆಸಿದ ಈ ಸ್ಪರ್ಧೆಯ ಫೈನಲ್ ಹಂತ ಪ್ರವೇಶಿಸಿದ ಅಮೇರಿಕಾದ 40 ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಇವರು ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಯ ಸೆಮಿಫೈನಲ್ನಲ್ಲಿ 300 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ಈ 40 ವಿದ್ಯಾರ್ಥಿಗಳು ಫೈನಲ್ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಂಶೋಧನೆಗಳು ಸೈದ್ಧಾಂತಿಕ ಮೂಲಗಳ ಸಂಶೋಧನೆ, ಅತ್ಯಂತ ನವೀನ ಪ್ರಾಯೋಗಿಕ ಅನ್ವೇಷಣೆಗಳು, ಅತಿ ಕಠಿಣ ಗಣಿತ ಲೆಕ್ಕಗಳನ್ನು ಪರಿಹರಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ಈ ವಿದ್ಯಾರ್ಥಿಗಳು ಭವಿಷ್ಯದ ನವೀನ ತತ್ವಗಳನ್ನು ರೂಪಿಸುವವರಾಗಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷೆ ಮಾಯಾ ಅಜ್ಮೇರಾ ಹೇಳಿದ್ದಾರೆ.
2015ರಲ್ಲಿ ನಡೆದ ಸ್ಪರ್ಧೆಯಲ್ಲಿ ಅನಿವಾಸಿ ಭಾರತೀಯ ಇಬ್ಬರು ವಿದ್ಯಾರ್ಥಿಗಳು 2ನೇ ಹಾಗೂ 3ನೇ ಸ್ಥಾನ ಪಡೆದುಕೊಂಡಿದ್ದರು.
ಈ ವರ್ಷದ ಪ್ರಶಸ್ತಿ ಸ್ಪರ್ಧೆಯು ವಾಷಿಂಗ್ಟನ್ನಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.