ಮುಂಬಯಿ: ಇತ್ತೀಚೆಗೆ ಬ್ರಿಟಿಷ್ ಸರ್ಕಾರ ಆಂಗ್ಲ ಭಾಷೆಯಲ್ಲಿ ಮಾತನಾಡಲು ವಿಫಲರಾದ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಇದೀಗ ಭಾರತದ ಮದರಸಾಗಳಲ್ಲಿ ಉರ್ದು ಮತ್ತು ಅರೇಬಿಕ್ ಭಾಷೆಯ ಬದಲು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನೇ ಶಿಕ್ಷಣದ ಮಾಧ್ಯಮವಾಗಿ ಬಳಸಬೇಕು ಎಂದು ಶಿವಸೇನೆ ಹೇಳಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ತಮ್ಮ ತತ್ವಗಳನ್ನು ಪ್ರಚುರಪಡಿಸಲು ಅಶಿಕ್ಷಿತ ಮುಸ್ಲಿಂ ಮಹಿಳೆಯರನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಇಂಗ್ಲಿಷ್ ಮಾತನಾಡಲು ಬಾರದ ಮಹಿಳೆಯರನ್ನು ಗಡೀಪಾರು ಮಾಡುವ ಬ್ರಿಟಿಷ್ ಸರ್ಕಾರದ ವಿಚಾರವು ಸರಿಯಾಗಿದೆ. ಭಾರತ ಸರ್ಕಾರ ಕೂಡ ಬ್ರಿಟಿಷ್ ಸರ್ಕಾರದ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಬ್ರಿಟಿಷ್ ಸರ್ಕಾರದ ಈ ನಿಯಮ ಅಕ್ಟೋಬರ್ 2016ರಿಂದ ಜಾರಿಗೆ ಬರಲಿದ್ದು, ಇಂಗ್ಲಿಷ್ ಕೌಶಲ್ಯವಿಲ್ಲದ ಮುಸ್ಲಿಂ ಮಹಿಳಾ ವಲಸಿಗರು ಮುಂದಿನ ಎರಡೂವರೆ ವರ್ಷದೊಳಗೆ ಇಂಗ್ಲಿಷ್ ಪರೀಕ್ಷೆ ತೆಗೆದುಕೊಳ್ಳಬೇಕಿದೆ.
ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ಏಕರೂಪ ಪೌರತ್ವದ (Uniform Civil Code) ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಿಬೇಕು ಎಂದು ಸೇನೆ ತನ್ನ ಮುಖವಾಣಿ ’ಸಾಮ್ನಾ’ದಲ್ಲಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.