ನವದೆಹಲಿ: ಭಾರತದ ಸುಮಾರು 18,452 ವಿದ್ಯುತ್ ರಹಿತ ಹಳ್ಳಿಗಳಲ್ಲಿ ಶೇ.25 ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಭಾಷಣದಲ್ಲಿ ಮುಂದಿನ 1000 ದಿನಗಳಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವ ಬಗ್ಗೆ ತಿಳಿಸಿದ್ದರು.
ಒಟ್ಟು 18,452 ಹಳ್ಳಿಗಳ ಪೈಕಿ 4,319 ಹಳ್ಳಿಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ವಿದ್ಯುತ್ ಕಲ್ಪಿಸಿದೆ ಎಂದು ಕೇಂದ್ರದ ’ಗರ್ವ್’ ಪೋರ್ಟಲ್ ವರದಿ ಮಾಡಿದೆ. ಸುಮಾರು 940 ಇತರ ಹಳ್ಳಿಗಳಿಗೆ ವಿದ್ಯುದೀಕರಣ ಪ್ರಕ್ರಿಯೆ ಚಾಲನೆಯಲ್ಲಿದ್ದು, 1,457 ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಪ್ರಕ್ರಿಯೆ ಕೊನೆಯ ಹಂತ ತಲುಪಿದೆ. ಇನ್ನುಳಿದ 11,736 ಹಳ್ಳಿಗಳಿಗೆ ವಿದ್ಯುದೀಕರಣ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ ಎಂದು ಗರ್ವ್ ಪ್ರಕಟಿಸಿದೆ.
ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನಾ (DDUGJY) ಅಡಿಯಲ್ಲಿ ದೇಶದಾದ್ಯಂತ 276 ಹಳ್ಳಿಗಳಿಗೆ ಜ.11ರಿಂದ 17ರ ನಡುವೆ ವಿದ್ಯುತ್ ಕಲ್ಪಿಸಲಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಈ ಹಳ್ಳಿಗಳಲ್ಲಿ ಅಸ್ಸಾಂನ 139, ಬಿಹಾರ್ನ 25 ಹಳ್ಳಿಗಳು, ಜಾಖಂಡ್ನ 21, ಒಡಿಶಾದ 60, ರಾಜಸ್ಥಾನದ 1 ಹಾಗೂ ಉತ್ತರ ಪ್ರದೇಶದ 30 ಹಳ್ಳಿಗಳು ಸೇರಿವೆ.
ಕೇಂದ್ರ ಸರ್ಕಾರವು 18,452 ಹಳ್ಳಿಗಳಿಗೆ ಮೇ 2018 ಒಳಗಾಗಿ ವಿದ್ಯುತ್ ಒದಗಿಸಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.