ಪೇಶಾವರ: ಪಾಕಿಸ್ಥಾನದ ವಾಯುವ್ಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯವೊಂದರ ಮೇಲೆ ಬುಧವಾರ ಉಗ್ರರ ದಾಳಿ ನಡೆದಿದೆ. ಇದುವರೆಗೆ ಎರಡು ಸ್ಫೋಟಗಳು ಸಂಭವಿಸಿದ್ದು, ಗುಂಡಿನ ಮೊರೆತಗಳು ಕೇಳಿಬರುತ್ತಿವೆ. 20 ಮಂದಿ ಬಲಿಯಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಬಾಚ ಖಾನ್ ವಿಶ್ವವಿದ್ಯಾನಿಲಯದ ಒಳಗಡೆ 3 ಸಾವಿರ ವಿದ್ಯಾರ್ಥಿಗಳು, 600 ಅತಿಥಿಗಳು ವಿಶೇಷ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭವೇ ಈ ದಾಳಿ ನಡೆದಿದೆ. ವಾಯುವ್ಯ ಭಾಗದ ಖೈಬರ್ ಪಕ್ತುಂಕ್ವ ಪ್ರಾಂತ್ಯದಲ್ಲಿ ಈ ವಿಶ್ವವಿದ್ಯಾನಿಲಯವಿದೆ.
ಸ್ಥಳಿಯ ಮಾಧ್ಯಮಗಳ ಪ್ರಕಾರ ಮೂವರು ಶಸ್ತ್ರಧಾರಿಗಳು ಒಳ ಪ್ರವೇಶಿಸಿದ್ದು, ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಗುಂಡಿನ ದಾಳಿ ನಡೆಸಿದ್ದದಾರೆ. ಹಾಸ್ಟೆಲ್, ಕ್ಲಾಸ್ರೂಮ್ಗಳ ಒಳಗೆ ದಾಳಿ ನಡೆಸಲಾಗಿದೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ನೋವು ಹೆಚ್ಚಾಗಿರುವ ಸಂಭವವಿದೆ.
ಪೊಲೀಸರು, ಭದ್ರತಾಪಡೆಗಳು ಉಗ್ರರನ್ನು ಸದೆಪಡೆಯಲು ಕಾರ್ಯಾಚರಣೆ ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.