ನವದೆಹಲಿ: ಪಠಾನ್ಕೋಟ್ ದಾಳಿಯಿಂದ ಎಚ್ಚೆತ್ತಿರುವ ಸರ್ಕಾರ ಭಯೋತ್ಪಾದಕರ ಒಳನುಸುಳುವಿಕೆ ತಡೆಯಲು ಭಾರತ-ಪಾಕ್ ಗಡಿಯ 40 ದುರ್ಬಲ ಹಾಗೂ ಆವರಣರಹಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಲೇಸರ್ ಗೋಡೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ.
ಪಾಕಿಸ್ಥಾನದ ಭಯೋತ್ಪಾದಕ ಗುಂಪುಗಳ ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ ಸಾಧ್ಯತೆಗಳನ್ನು ತೊಡೆದು ಹಾಕಲು ಭಾರತದ ಗಡಿ ಭದ್ರತಾ ಪಡೆ ಲೇಸರ್ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಗೋಡೆಯನ್ನು ನಿರ್ಮಿಸಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ನದಿ ದಂಡೆ ಭಾಗದಲ್ಲಿ ಲೇಸರ್ ಗೋಡೆಯ ಸಮೀಪದಲ್ಲೇ ಹಾದು ಹೋಗುವ ವಸ್ತುಗಳು ಅಥವಾ ವ್ಯಕ್ತಿಗಳನ್ನು ಲೇಸರ್ ಸಹಾಯದಿಂದ ಪತ್ತೆ ಹಚ್ಚಲಿದ್ದು, ಗಡಿ ಉಲ್ಲಂಘಿಸಿ ಒಳನುಸುಳಿದಲ್ಲಿ ಸೈರನ್ ಮೂಲಕ ಎಚ್ಚರಿಸಲಿದೆ. 40 ನದಿ ಪ್ರದೇಶಗಳ ಪೈಕಿ 5-6 ನದಿ ಪ್ರದೇಶದಲ್ಲಿ ಮಾತ್ರ ಲೇಸರ್ ಗೋಡೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.