ಚಂಡೀಗಢ: ದೇಶದಲ್ಲೇ ಪಂಜಾಬ್ನಲ್ಲಿ ಅತಿಹೆಚ್ಚು ಮಾದಕವ್ಯಸನಿಗಳಿದ್ದಾರೆ ಎಂಬುದು ತಿಳಿದಿರುವ ಸಂಗತಿ. ವರದಿಯೊಂದರ ಪ್ರಕಾರ ಇಲ್ಲಿ ಪ್ರತಿವರ್ಷ ಸುಮಾರು 7,500 ಕೋಟಿ ಮೌಲ್ಯದ ಓಪಿಆಯ್ಡ್ಸ್ಗಳನ್ನು ಸೇವಿಸಲಾಗುತ್ತಿದೆ.
ಇದರಲ್ಲಿ 6,500 ಕೋಟಿ ಮೌಲ್ಯದ ಹೆರಾಯಿನ್ಗಳನ್ನೇ ಬಳಸಲಾಗುತ್ತದೆ. ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್ಮೆಂಟ್ ಸೆಂಟರ್ನ ವರದಿಯ ಪ್ರಕಾರ ಪಂಜಾಬ್ನಲ್ಲಿ 2.3 ಲಕ್ಷ ಮಂದಿ ಓಪಿಆಯ್ಡ್ಸ್ನ್ನು ಆಧರಿಸಿದ್ದಾರೆ. ಇವರಲ್ಲಿ ಶೇ.76ರಷ್ಟು ಮಂದಿ 18ರಿಂದ 35 ವರ್ಷ ಒಳಗಿನವರು.
ಓಪಿಆಯ್ಡ್ಸ್ನಲ್ಲಿ ಶೇ.೫೩ರಷ್ಟು ಹೆರಾಯಿನ್, ಶೇ.33ರಷ್ಟು ಓಪಿಮ್, ದೊಡ, ಫುಕ್ಕಿ ಮತ್ತು ಶೇ.14ರಷ್ಟು ವಿವಿಧ ಔಷಧೀಯ ಓಪಿಆಯ್ಡ್ಸ್ಗಳನ್ನು ಬಳಕೆ ಮಾಡಲಾಗುತ್ತದೆ. 90ರಷ್ಟು ಮಂದಿ ಇಂಜೆಕ್ಷನ್ ಮೂಲಕ ಹೆರಾಯಿನ್ ಸೇವನೆ ಮಾಡುತ್ತಾರೆ.
ಓಪಿಆಯ್ಡ್ಸ್ ಆಧರಿತ ಒಟ್ಟು ಜನರು 20ಕೋಟಿ ಇದರ ಮೇಲೆ ಸುರಿಯುತ್ತಿದ್ದರೆ, ಹೆರಾಯಿನ್ ಆಧರಿತ ತಲಾ ಒಬ್ಬರು 1,400 ವ್ಯಯಿಸುತ್ತಿದ್ದಾರೆ. ಶೇ.99ರಷ್ಟು ಮಾದಕ ವ್ಯಸನಿಗಳು ಪುರುಷರು, ಇವರಲ್ಲಿ ಶೇ.40ರಷ್ಟು ಮಂದಿ ವಿವಾಹಿತರಾಗಿದ್ದಾರೆ. ಶೇ.89ರಷ್ಟು ಮಂದಿ ಮಾದಕವ್ಯಸನಿಗಳು ವಿದ್ಯಾವಂತರು. ಶೇ.56ರಷ್ಟು ಮಂದಿ ಗ್ರಾಮೀಣ ಪ್ರದೇಶಕ್ಕೆ ಸೇರಿದವರು. ಶೇ.99ರಷ್ಟು ಮಂದಿ ಪಂಜಾಬಿ ತಮ್ಮ ತಾಯಿ ಭಾಷೆ ಎಂದಿದ್ದಾರೆ.
ಶೇ.80ರಷ್ಟು ಮಂದಿ ತಮ್ಮ ದುಶ್ಚಟವನ್ನು ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕಾಗಿ ಶೇ.35ರಷ್ಟು ಮಂದಿ ಮಾತ್ರ ಇತರರ ಸಹಾಯವನ್ನು ಪಡೆದಿದ್ದಾರೆ ಎಂದು ವರದಿ ಹೇಳಿದೆ.
ಎಲ್ಲಾ ಹೆರಾಯಿನ್ಗಳು ಪಾಕಿಸ್ಥಾನದಿಂದ ಕಳ್ಳಸಾಗಾಣೆದಾರರ ಮೂಲಕವೇ ಬಾರ್ಡರ್ ಪಂಜಾಬ್ನೊಳಗೆ ನುಗ್ಗುತ್ತಿವೆ. ಪಾಕಿಸ್ಥಾನ ಡ್ರಗ್ ಕಳ್ಳಸಾಗಾಣೆ ಮೂಲಕ ಭಾರತದೊಳಕ್ಕೆ ಭಯೋತ್ಪಾದಕರನ್ನು ಮಾತ್ರ ನುಸುಳಿಸುತ್ತಿಲ್ಲ, ಬದಲಾಗಿ ಪಂಜಾಬ್ ಜನತೆಯನ್ನು ಮಾದಕವ್ಯಸನಿಗಳಾಗಿ ಪರಿವರ್ತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.