ನವದೆಹಲಿ: ರಾಜಪಥ್ನಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾರತೀಯ ಸೇನೆಯ ಶ್ವಾನಗಳು ಪಾಲ್ಗೊಳ್ಳಲಿವೆ. ಬರೋಬ್ಬರಿ 26 ವರ್ಷಗಳ ಬಳಿಕ ಶ್ವಾನಗಳಿಗೆ ಈ ಅವಕಾಶ ಸಿಕ್ಕಿದೆ.
ಸೇನೆಯಲ್ಲಿ ಒಟ್ಟು 1,200 ಲ್ಯಾಬ್ರೊಡಾರ್ಸ್ ಮತ್ತು ಜರ್ಮನ್ ಶೆಫರ್ಡ್ ಶ್ವಾನಗಳಿವೆ. ಇವುಗಳಲ್ಲಿ ಭಯೋತ್ಪಾದನ ವಿರೋಧಿ ಕಾರ್ಯಾಚರಣೆಯಲ್ಲಿ, ದಂಗೆ ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ 36 ಶ್ವಾನಗಳು ಪೆರೇಡ್ನಲ್ಲಿ ಪಾಲ್ಗೊಳ್ಳಲಿವೆ.
ಹಲವಾರು ಸೇನಾ ಶ್ವಾನಗಳು ಸೈನಿಕರಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿವೆ. 1960, ಮಾ.1ರಂದು ಮೀರತ್ನಲ್ಲಿ ಶ್ವಾನಗಳಿಗೆ ತರಬೇತಿ ಶಾಲೆಯನ್ನು ಆರಂಭಿಸಲಾಯಿತು. ಸ್ಫೋಟಕ ಪತ್ತೆ, ಗಣಿ ಪತ್ತೆ, ಟ್ರ್ಯಾಕಿಂಕ್, ಗಾರ್ಡಿಂಗ್ ಮುಂತಾದುವುಗಳನ್ನು ಇಲ್ಲಿ ಇವುಗಳಿಗೆ ಕಲಿಸಿಕೊಡಲಾಗುತ್ತದೆ.
ಇದುವರೆಗೆ ಶ್ವಾನ ಮತ್ತು ಅದರ ತರಬೇತುದಾರರಿಗೆ ಒಂದು ಶೌರ್ಯ ಚಕ್ರ, ಆರು ಸೇನಾ ಪದಕಗಳು, 120 ಸಿಒಎಎಸ್ ಕಮಂಡೇಶನ್ ಕಾರ್ಡ್ಸ್, ಆರು ವಿಸಿಒಎಎಸ್ ಕಮಂಡೇಶನ್ ಕಾರ್ಡ್ಸ್ ಮತ್ತು 448 ಜಿಒಸಿ-ಇನ್-ಸಿ ಕಮಂಡೇಶನ್ ಕಾರ್ಡ್ಸ್ ಸಿಕ್ಕಿವೆ. ಶ್ವಾನ ಪಡೆಯ ಘೋಷ ವಾಕ್ಯ ’ಪಶು ಸೇವಾ ಅಶ್ಮಕಂ ಧರ್ಮ್’ ಎಂಬುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.