ಆಗ್ರಾ: ದೇಶದಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಳ್ಳು ಬೆಲ್ಲ ತಿನ್ನುವುದು, ಗಾಳಿಪಟ ಹಾರಿಸುವುದುಈ ಹಬ್ಬದ ವಿಶೇಷತೆ.
ಆಗ್ರಾದ ಕಲಾಕೃತಿ ಮೈದಾನದಲ್ಲೂ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ‘ಪತಂಗ್ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ. ಆದರೆ ಇದು ಕೇವಲ ಗಾಳಿಪಟ ಹಾರಿಸಿ ಸಂಭ್ರಮಪಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಪಸರಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ.
ಈ ಮಹೋತ್ಸವದಲ್ಲಿ ಒಟ್ಟು 6 ಸಾವಿರ ದೇಶ ಮತ್ತು ವಿದೇಶಗಳ ವೈದ್ಯರು ಭಾಗವಹಿಸಿ ಗಾಳಿಪಟ ಹಾರಿಸುತ್ತಾರೆ, ಮಾತ್ರವಲ್ಲ ’ಹೆಣ್ಣು ಮಗುವನ್ನು ಉಳಿಸಿ’ ಎಂಬ ಸಂದೇಶವನ್ನು ಸಾರುತ್ತಾರೆ.
ಅಲ್ಲದೇ ದೇಶದ ವಿವಿಧ ಭಾಗದಿಂದ ಬಂದ 70 ಹೆಣ್ಣುಮಕ್ಕಳು ಹೆಣ್ಣುಮಕ್ಕಳ ಪರವಾಗಿ ಪಂಜಿನ ಮೆರವಣಿಗೆ ನಡೆಸಲಿದ್ದಾರೆ. ಸಮಾರಂಭದಲ್ಲಿ 500ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತದೆ.
ಈ ಪತಂಗ್ ಮಹೋತ್ಸವದಲ್ಲಿ ಪಾಕ್, ಶ್ರೀಲಂಕಾ, ಯುಎಸ್ಎ, ಚೀನಾ, ಅಫ್ಘಾನಿಸ್ತಾನ ಸೇರಿದಂತೆ 200 ದೇಶಗಳ ವೈದ್ಯರು ಭಾಗವಹಿಸಲಿದ್ದಾರೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಸಂಸದೆ ಕಿರಣ್ ಖೇರ್ ಸೇರಿದಂತೆ ಹಲವಾರು ಮಂದಿ ಗುರವಾರ ಸಂಜೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.