ತಿರುವನಂತಪುರಂ: ಕೇರಳ ಪ್ರಾಥಮಿಕ ಶಿಕ್ಷಣದಲ್ಲಿ 100 ಪ್ರತಿಶತ ಸಾಕ್ಷರತೆ ಹೊಂದಿರುವ ದೇಶದ ಮೊದಲ ರಾಜ್ಯವೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಬುಧವಾರ ಅಧಿಕೃತವಾಗಿ ಘೋಷಿಸಲಿದ್ದಾರೆ.
ಜ.13ರಂದು ಮೂರು ದಿನಗಳ ಕೇರಳ ರಾಜ್ಯ ಭೇಟಿ ವೇಳೆ ಇಲ್ಲಿನ ಸೆನೆಟ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನ್ಸಾರಿ ಅವರು ಈ ಘೋಷಣೆ ಮಾಡಲಿದ್ದಾರೆ.
ಶಿಕ್ಷಣ ಪಡೆಯಲು ಸಾಧ್ಯವಾಗದ 1ರಿಂದ 50 ವರ್ಷದೊಳಗಿನ ಜನರಿಗೆ ’ಅತುಲ್ಯಂ’ ಸಾಕ್ಷರತಾ ಕಾರ್ಯಕ್ರದ ಮೂಲಕ ಎರಡು ಹಂತಗಳಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದು ರಾಜ್ಯದ ಗುರಿಯಾಗಿದೆ. ’ಅತುಲ್ಯಂ’ ಕಾರ್ಯಕ್ರಮದ ಮೊದಲ ಹಂತ 2010ರಲ್ಲಿ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಪಿ.ಕೆ. ಅಬ್ದುರಬ್ ತಿಳಿಸಿದ್ದಾರೆ.
2015 ರಲ್ಲಿ ಕೇರಳದ 6,613 ಕೇಂದ್ರಗಳಲ್ಲಿ ಕನಿಷ್ಠ 2.6 ಲಕ್ಷ ಜನರು ನಾಲ್ಕನೇ ತರಗತಿ ಸಮಾನಾಂತರ ಪರೀಕ್ಷೆ ಬರೆದಿದ್ದು, 2.2 ಲಕ್ಷ ಜನರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ’ಅತುಲ್ಯಂ’ ಯೋಜನೆಯನ್ನು ಮಿಷನ್ 676 ಭಾಗವಾಗಿ ಕೇರಳ ಸರ್ಕಾರ ಜಾರಿಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.