ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ತನಿಖೆ ಮುಂದುವರೆದಿದ್ದು, ದಾಳಿ ವೇಳೆ ಬಳಸಲಾದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ದಾಳಿಗೂ ಮುನ್ನ ವಾಯುನೆಲೆಯ ಆಂತರಿಕ ಸಿಬ್ಬಂದಿಗಳು ಕಳ್ಳಸಾಗಣೆ ಮಾಡಿರಬಹುದೆಂದು ಶಂಕಿಸಲಾಗಿದೆ.
ವರದಿಗಳ ಪ್ರಕಾರ ದಾಳಿಯ ಸಂದರ್ಭದಲದಲ್ಲಿ ಭಯೋತ್ಪಾದಕರು ಬಳಸಿದ ಭಾರೀ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಆಂತರಕ ಸಿಬ್ಬಂದಿಗಳ ಕೈವಾಡ ಇರುವ ಬಗ್ಗೆ ಶಂಕೆ ವ್ತಕ್ತಪಡಿಸಿದ್ದಾರೆ.
ಆಂತರಿಕ ಸಿಬ್ಬಂದಿಗಳ ಕೈವಾಡವಿಲ್ಲದೆ ಉಗ್ರರು ವಾಹನಗಳ ಅಪಹರಣ, ವಾಯುನೆಲೆಯ 10 ಅಡಿ ಎತ್ತರದ ಆವರಣ ಗೋಡೆ ಜಿಗಿದು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ಹೊತ್ತೊಯ್ಯಲು ಮತ್ತು ಪಠಾನ್ಕೋಟ್ ಅಂತಾರಾಷ್ಟ್ರೀಯ ಗಡಿ ದಾಟಲು ಸಾಧ್ಯವಾಗುತ್ತಿರಲಿಲ್ಲ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.