ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಇಲ್ಲಿನ ದಿವ್ಯಾಂಗರಿಗೆ ಹಂಚಲಿರುವ ಮೂರು ಗಾಲಿ ಸೈಕಲ್ಗಳು ಕಾಶಿಗೆ ತಲುಪಿದ್ದು, ಈಗಾಗಲೇ ’ಮೋದಿ ಟ್ರೈಸೈಕಲ್’ ಎಂದು ಪ್ರಸಿದ್ಧಿ ಪಡೆದಿದೆ.
ಡೀಸೆಲ್ ಲೊಕೊಮೋಟಿವ್ ವರ್ಕ್ಸ್ (ಡಿಎಲ್ಡಬ್ಲೂ) ಕಾಲೇಜು ಆವರಣದಲ್ಲಿ ಒಂಬತ್ತು ಟ್ರಕ್ಗಳಲ್ಲಿ ಈ ಮೂರು ಗಾಲಿಯ ಸೈಕಲ್ಗಳು ಬಂದಿಳಿದಿವೆ. ಸಾಮಾಜಹಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜ.22ರಂದು ಡಿಎಲ್ಡಬ್ಲೂ ಮಧ್ಯಂತರ ಕಾಲೇಜು ಆವರಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಪ್ರಧಾನಿ ಮೋದಿ ಅವರು ಆಯ್ದ ದಿವ್ಯಾಂಗರಿಗೆ ತ್ರಿಚಕ್ರ ಸೈಕಲ್ಗಳನ್ನು ಹಂಚಲಿದ್ದಾರೆ.
ಕಂಪೆನಿಯು ದಿವ್ಯಾಂಗರಿಗೆ ಗಾಲಿ ಕುರ್ಚಿಗಳು, ಕೃತಕ ಕಾಲು ಹೊಂದಿದವರಿಗೆ ಮೂರು ಗಾಲಿಯ ಸೈಕಲ್, ಕಿವುಡರು ಮತ್ತಿತರರಿಗೆ 140 ಟ್ರಕ್ಗಳಲ್ಲಿ ವಿಶೇಷ ಉಪಕರಣಗಳನ್ನು ಸರಬರಾಜು ಮಾಡಲಿದೆ ಎಂದು ಜಿಲ್ಲಾ ವಿಕಲಾಂಗರ ಕಲ್ಯಾಣ ಅಧಿಕಾರಿ ರಂಜಿತ್ ಸಿಂಗ್ ತಿಳಿಸಿದ್ದಾರೆ.
ಸಚಿವಾಲದ ಜಂಟಿ ಕಾರ್ಯದರ್ಶಿ ಅವನೀಶ್ ಅವಸ್ಥಿ ಅವರು ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ನಗರದಲ್ಲಿ ಈಗಾಗಲೇ ಗಮನಹರಿಸುತ್ತಿದ್ದು, ಜಿಲ್ಲೆಯಲ್ಲಿ ವಿವಿಧ ವರ್ಗಗಳ 7766 ಫಲಾನುಭಾವಿಗಳಿಗೆ ವಿವಿಧ ಅಗತ್ಯ ಉಪಕರಣಗಳನ್ನು ನೀಡಲಾಗುತ್ತಿದೆ. ಇದರಲ್ಲಿ 3200 ಫಲಾನುಭಾವಿಗಳು ತ್ರಿಚಕ್ರ ಸೈಕಲ್ಗಳನ್ನು ಪಡೆಯಲಿದ್ದಾರೆ ಎಂದು ರಂಜಿತ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.