ದೆಹರಾಡೂನ್: ಉತ್ತರಾಖಂಡ ಸರ್ಕಾರ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ’ದಿ ಗ್ರೇಟ್ ಖಲಿ ಮೆನಿಯಾ’ ಕುಸ್ತಿ ಪಂದ್ಯಾಟವನ್ನು ಆಯೋಜಿಸಲಿದೆ ಎಂದು ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ.
ಈ ಸಂದರ್ಭ ಉಪಸ್ಥಿತರಿದ್ದ ವೃತ್ತಿಪರ ಕುಸ್ತಿಪಟು ಖಲಿ, ಉತ್ತರಾಖಂಡದಲ್ಲಿ ನಡೆಯಲಿರುವ ಪ್ರೋ-ಕುಸ್ತಿ ಪಂದ್ಯಾಟದಲ್ಲಿ ತಮ್ಮನ್ನು ಮಣಿಸುವಂತೆ ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ ಸವಾಲೊಡ್ಡಿದ್ದಾರೆ. ನಾಲ್ಕು ಮಂದಿ ಮಹಿಳಾ ಕುಸ್ತಿಪಟುಗಳು ಸೇರಿದಂತೆ 14 ಕುಸ್ತಿಪಟುಗಳು ಕ್ರೀಡೆಯಲ್ಲಿ ಭಾಗವಹಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಖಲಿ ಅಲ್ಲದೇ ಭಾರತದ ಇತರ ಕುಸ್ತಿಪಟುಗಳು ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲ್ದ್ವಾನಿ ಹಾಗೂ ದೆಹರಾಡೂನ್ಗಳಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಹೊಸ ಕ್ರೀಡಾಂಗಣಗಳಲ್ಲಿ ಫೆ.24 ಮತ್ತು ಫೆ.28ರಂದು ಕುಸ್ತಿ ಪಂದ್ಯಾಟಗಳು ನಡೆಯಲಿವೆ. ಸುಮಾರು 15,000 ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದ್ದು, ಉತ್ತರಾಖಂಡದ ಪ್ರತಿ ಜಿಲ್ಲೆಗಳಲ್ಲಿ ಎಲ್ಇಡಿ ಸ್ಕ್ರೀನ್ಗಳ ಮೂಲಕ ಪಂದ್ಯಗಳ ನೇರ ಪ್ರಸಾರ ಮಾಡಲಾಗುವುದು ಎಂದು ರಾವತ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.