ನವದೆಹಲಿ: 2015ರಲ್ಲಿ ಅತೀ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಡೆದುಕೊಂಡಿದ್ದಾರೆ. ಅವರ ಬಳಿಕದ ಸ್ಥಾನವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಡೆದುಕೊಂಡಿದ್ದಾರೆ. ಆದರೆ ಈ ವಿಷಯ ಆಶ್ಚರ್ಯಕರವಲ್ಲ ಎಂಬ ಅಭಿಪ್ರಾಯವನ್ನೇ ಅನೇಕರು ವ್ಯಕ್ತಪಡಿಸಿದ್ದಾರೆ.
‘ದಿ ಗೂಂಜ್ ಇಂಡಿಯಾ ಇಂಡೆಕ್ಸ್ 2015: 7 ಡೆಡ್ಲಿ ಇಂಡಿಯನ್ ಸಿನ್ಸ್’ ವರದಿಯ ಪ್ರಕಾರ, 2015ರಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ನಾಯಕರು ಅತೀ ದ್ವೇಷಿಸಲ್ಪಟ್ಟ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಯಾವ ವಿಷಯದಲ್ಲಿ ಭಾರತೀಯರು ಹೆಚ್ಚು ಆಸಕ್ತರಾಗಿದ್ದಾರೆ, ಡಿಜಿಟಲ್ ಮೀಡಿಯಾದಲ್ಲಿ ಯಾವುದರ ಬಗ್ಗೆ ಹೆಚ್ಚು ಚರ್ಚಿಸಿದ್ದಾರೆ, ಸರ್ಚ್ ಮಾಡಿದ್ದಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಗೂಂಜ್ ಇಂಡಿಯಾ ಇಂಡೆಕ್ಸ್ ವರದಿ ನೀಡಿದೆ. ಇಂಟರ್ನೆಟ್ನಲ್ಲಿ ಕೇಜ್ರಿವಾಲ್ ಬಗ್ಗೆ ಹೆಚ್ಚು ನಕಾರಾತ್ಮಕ ಅಂಶಗಳೇ ಇವೆ ಎಂದು ಅದು ಹೇಳಿದೆ.
ದ್ವೇಷಿಸಲ್ಪಡುವ ಪಟ್ಟಿಯಲ್ಲಿ ಕೇಜ್ರಿವಾಲ್ ಟಾಪ್ನಲ್ಲಿದ್ದರೆ, ಅವರ ಬಳಿಕದ ಸ್ಥಾನ ರಾಹುಲ್ ಗಾಂಧಿ ಪಡೆದುಕೊಂಡಿದ್ದಾರೆ, ಬಳಿಕ ಅಮೀರ್ ಖಾನ್, ಅರ್ನಬ್ ಗೋಸ್ವಾಮಿ, ಸೋನಿಯಾ ಗಾಂಧಿ, ಅಮಿತ್ ಷಾ, ಶಾರುಖ್ ಖಾನ್, ಉದ್ಧವ್ ಠಾಕ್ರೆ, ಹಾರ್ದಿಕ್ ಪಾಟೇಲ್, ಯೋ ಯೋ ಹನಿ ಸಿಂಗ್ ಟಾಪ್ ಲಿಸ್ಟ್ನಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.