ನವದೆಹಲಿ: ಭಾರತದ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 150 ಬಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ. ಭಾರತದಲ್ಲಿ ಆಡಲಾಗುತ್ತಿರುವ ಪ್ರತಿ ಏಕದಿನ ಪಂದ್ಯದಲ್ಲಿ 200 ಮಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ದೋಹಾ ಮೂಲದ ಅಂತಾರಾಷ್ಟ್ರೀಯ ಕ್ರೀಡಾ ಭದ್ರತೆ ಕೇಂದ್ರ ಹೇಳಿದೆ. ಈ ಕೇಂದ್ರ ಕ್ರೀಡಾ ಭದ್ರತೆ ಮತ್ತು ಸಮಗ್ರತೆಯನ್ನು ಪ್ರೋತ್ಸಾಹಿಸುತ್ತಿದೆ.
ಜಸ್ಟೀಸ್ ಲೋಧಾ ಸಲ್ಲಿಸಿದ ವರದಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನ್ನು ಕಾನೂನಾತ್ಮಕಗೊಳಿಸಬೇಕು. ಅಲ್ಲದೇ ಮ್ಯಾಚ್ ಫಿಕ್ಸಿಂಗ್ನ್ನು ಒಂದು ಅಪರಾಧವನ್ನಾಗಿ ಪರಿಗಣಿಸಬೇಕು ಎಂದು ಹೇಳಿದೆ. ಭಾರತದಲ್ಲಿ ಕುದುರೆ ಸವಾರಿ ಮಾತ್ರ ಕಾನೂನು ರೀತಿಯಲ್ಲಿ ನಡೆಯುತ್ತಿದ್ದು, ಬೆಟ್ಟಿಂಗ್ ಆಸಕ್ತರು ಅಕ್ರಮ ಬುಕ್ಕಿಗಳ ಮೂಲಕ ವ್ಯವಹರಿಸುತ್ತಿದ್ದಾರೆ. ಹವಾಲಾ ವ್ಯವಸ್ಥೆ ಕೂಡ ಈ ಹಾದಿಯಲ್ಲಿ ಸಾಗುತ್ತಿದ್ದು, ಸಾಲ ಪಡೆಯುವುದು ಒಂದು ಅನಿವಾರ್ಯತೆಯಾಗಿ ಮಾರ್ಪಟ್ಟಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಕ್ರೀಡೆಯ ಜಾಗತಿಕ ಬೆಟ್ಟಿಂಗ್ ಮಾರುಕಟ್ಟೆ 4 ಬಿಲಿಯನ್ ತಲುಪುವ ಸಾಧ್ಯತೆ ಇದೆ ಎಂದು ಸಮಿತಿ ಅಂದಾಜಿಸಿದೆ.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಫೆಡರೇಷನ್ ಭಾರತ ಸರ್ಕಾರ ಕಾನೂನಾತ್ಮಕ ಬೆಟ್ಟಿಂಗ್ನಿಂದ ಪ್ರತಿ ವರ್ಷ 12,000 ರಿಂದ 19,000 ಕೋಟಿ ಗಳಿಸಬಹುದು ಎಂದು ಹೇಳಿದೆ. ಪ್ರತಿ ರಾಜ್ಯಗಳು ಕುದುರೆ ಸವಾರಿ ಮೇಲೆ ಬೆಟ್ಟಿಂಗ್ನ ಶೇ.20 ತೆರಿಗೆ ಪಡೆಯುತ್ತಿವೆ ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.