ನವದೆಹಲಿ: 2016ರ ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಕೇಂದ್ರ ಘೋಷಿಸಿದ್ದು, 2018ರೊಳಗೆ ಎಲ್ಲರಿಗೂ ಅಡುಗೆ ಅನಿಲವನ್ನು ಒದಗಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ.
‘2016 ಎಲ್ಪಿಜಿ ಗ್ರಾಹಕರ ವರ್ಷವಾಗಲಿದೆ. ಎಲ್ಲರಿಗೂ ಎಲ್ಪಿಜಿ ತಲುಪುವಂತೆ, ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ದೇಶದ ಸರ್ವ ಜನರಿಗೂ ಎಲ್ಪಿಜಿ ಸಿಗುವಂತೆ ಮಾಡಲು 2016, 2017 ಮತ್ತು 2018ರಲ್ಲಿ ಮಹತ್ವದ ಟಾರ್ಗೆಟ್ಗಳನ್ನು ಇಟ್ಟುಕೊಳ್ಳುತ್ತೇವೆ’ ಎಂದು ಕೇಂದ್ರ ಇಂಧನ ಸಚಿವ ಧರ್ಮೇದ್ರ ಪ್ರಧಾನ್ ಹೇಳಿದ್ದಾರೆ.
ದೇಶದಾದ್ಯಂತ ಇರುವ ಅಡುಗೆ ಅನಿಲ ಗ್ರಾಹಕರಿಗಾಗಿ ಎಲ್ಪಿಜಿ ಎರ್ಮೆಜೆನ್ಸಿ ಹೆಲ್ಪ್ಲೈನ್ ನಂಬರ್ 1906ಗೆ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ. ಗ್ಯಾಸ್ ಲೀಕೆಜ್ನಂತಹ ಸಮಸ್ಯೆಗಳನ್ನು ನಿವಾರಿಸಲು ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಈ ನಂಬರ್ನ್ನು ಟೋಲ್ ಫ್ರೀ ಮಾಡುವಂತೆಯೂ ಅವರು ಆಯಿಲ್ ಮಾರ್ಕೆಂಟಿಗ್ ಕಂಪನಿಗಳಿಗೆ ಸೂಚಿಸಿದ್ದಾರೆ.
ದೇಶದಲ್ಲಿ ಒಟ್ಟು 27 ಕೋಟಿ ಎಲ್ಪಿಜಿ ಗ್ರಾಹಕರಿದ್ದಾರೆ. ಇದರಲ್ಲಿ 16.5 ಕೋಟಿ ಸಕ್ರಿಯ ಗ್ರಾಹಕರು, ಶೇ.60ರಷ್ಟು ಜನಸಂಖ್ಯೆಯನ್ನು ಆಯಿಲ್ ಮಾರ್ಕೆಂಟಿಗ್ ಕಂಪನಿಗಳೇ ಕವರ್ ಮಾಡುತ್ತವೆ. ಪ್ರಸ್ತುತ ನಾವು ಶೇ.100ರಷ್ಟು ಕವರ್ ಮಾಡುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಾದಂತೆ ಹೆಚ್ಚಿನ ಜನ ಎಲ್ಪಿಜಿಯತ್ತ ಮುಖ ಮಾಡುತ್ತಾರೆ ಎಂದು ಪ್ರಧಾನ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.