ನವದೆಹಲಿ: ಲಿಂಗಾನುಪಾತದ ಬಗೆಗಿನ ನೂತನ ವರದಿ ಕಳವಳಕಾರಿಯಾಗಿದ್ದು, ಹೆಣ್ಣು ಮಗುವನ್ನು ರಕ್ಷಿಸಲು ಕಠಿಣ ಕ್ರಮವನ್ನು ಅನುಸರಿಸಲೇ ಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದೆ.
1961ರ ಬಳಿಕ ಭಾರತದ ಲಿಂಗಾನುಪಾತ ತೀವ್ರ ತರನಾಗಿ ಕುಸಿತ ಕಂಡಿದೆ. ಅದರಲ್ಲೂ ಹಿಂದೂಗಳ ಲಿಂಗಾನುಪಾತ ಶೋಚನೀಯವಾಗಿದೆ.
0-6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ ಎಷ್ಟು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಲೆಕ್ಕಚಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ.
ಹಿಂದೂಗಳಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 913 ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. 2001ರಲ್ಲಿ ಈ ಸಂಖ್ಯೆ 925 ಇತ್ತು.
ಕ್ರಿಶ್ಚಿಯನ್ನರಲ್ಲಿ 958 ಹೆಣ್ಣು ಮಕ್ಕಳಿದ್ದಾರೆ, 2001ರಲ್ಲಿ ಈ ಸಂಖ್ಯೆ 964ಇತ್ತು.
ಮುಸ್ಲಿಂರಲ್ಲಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಸಂಖ್ಯೆ 943 ಇದೆ. 2001ರಲ್ಲಿ ಇದು 950 ಇತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.