ಚಂಡೀಗಢ: ದಿನಂಪ್ರತಿ ಕೋರ್ಟ್ ಆವರಣದಲ್ಲಿ ಚಹಾ ಮಾರಿ ತನ್ನ ಮಗಳನ್ನು ಬೆಳೆಸಿದ್ದ ಆ ತಂದೆಗಿದು ಹೆಮ್ಮೆಯ ಕ್ಷಣ, ಆತನ ಜೀವನ ಸಾರ್ಥಕ ಎನಿಸಿದ ಅಪೂರ್ವ ಕ್ಷಣ.
ಸುರಿಂದರ್ ಕುಮಾರ್ ಪಂಜಾಬ್ನ ನಕೋಡರ್ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಚಹಾ ಮಾಡಿ ಸಂಸಾರವನ್ನು ಸಾಕುತ್ತಿದ್ದವರು. ತನ್ನ ಮಗಳು ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳಬೇಕೆಂಬ ಆಶಯ ಅವರದ್ದಾಗಿತ್ತೇ ಹೊರತು ಮಗಳು ನ್ಯಾಯಾಧೀಶೆಯಾಗಬೇಕು ಎಂಬ ದೊಡ್ಡ ಕನಸನ್ನು ಅವರೆಂದೂ ಕಂಡಿರಲಿಲ್ಲ.
ಆದರೆ ಅವರ ಮಗಳು ಶ್ರುತಿ ಪಂಜಾಬ್ ಸಿವಿಲ್ ಸರ್ವಿಸ್ ಎಕ್ಸಾಂನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ದು, ಜಡ್ಜ್ ಆಗಿ ನೇಮಕವಾಗಿದ್ದಾರೆ. ಶೀಘ್ರದಲ್ಲೇ ತಂದೆ ಚಹಾ ಮಾರುತ್ತಿದ್ದ ಕೋರ್ಟ್ನಲ್ಲೇ ಜನರಿಗೆ ನ್ಯಾಯದಾನ ಮಾಡಲಿದ್ದಾರೆ.
ತಾನು ಚಹಾ ಮಾರಿ ಜೀವನ ಸವೆಸಿದ ಕೋರ್ಟ್ನಲ್ಲಿ ಮಗಳು ನ್ಯಾಯದಾನ ಮಾಡುತ್ತಾಳೆ ಎಂಬ ಹೆಮ್ಮೆ ಸುರೀಂದರ್ ಕುಮಾರ್ ಅವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.