ದೆಹಲಿ: ಭಾರತದ 23ಮಂದಿ ಇರಾಕ್ ಮತ್ತು ಸಿರಿಯಾದಲ್ಲಿ ಉಗ್ರ ಸಂಘಟನೆ ಇಸಿಸ್ ಪರವಾಗಿ ಹೋರಾಡುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
23 ಮಂದಿಯಲ್ಲಿ 17 ಮಂದಿ ದಕ್ಷಿಣ ಭಾರತ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕರ್ನಾಟಕ 6 ಮಂದಿ, ಆಂಧ್ರಪ್ರದೇಶ, ತೆಲಂಗಾಣದ ನಾಲ್ಕು ಮಂದಿ, ಕೇರಳದ ನಾಲ್ಕು, ತಮಿಳುನಾಡಿನ ಮೂವರು, ಮಹಾರಾಷ್ಟ್ರದ 4 ಮಂದಿ, ಜಮ್ಮು ಕಾಶ್ಮೀರದ ಒರ್ವ, ಉತ್ತರಪ್ರದೇಶದ ಒರ್ವ ಇಸಿಸ್ ಸೇರಿದ್ದಾರೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.
23 ಮಂದಿಯನ್ನು ಹೊರತುಪಡಿಸಿ ಉಳಿದ ಆರು ಮಂದಿ ಇಸಿಸ್ಗಾಗಿ ಹೋರಾಡುತ್ತಲೇ ಪ್ರಾಣ ತೆತ್ತಿದ್ದಾರೆ. ಇಬ್ಬರು ವಾಪಾಸ್ ಬಂದಿದ್ದಾರೆ.
ವಿಜಯಪುರದ ಅಬ್ದುಲ್ ಖುಡುಸ್ ತರ್ಕಿ, ಬೆಂಗಳೂರಿನ ಉಮರ್ ಸುಬಹನ್ ಮತ್ತು ಫೈಜ್ ಮಸೂದ್, ಭಟ್ಕಳದ ಮೌಲಾನಾ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಮತ್ತು ಮೊಹಮ್ಮದ್ ರಿಯಾಝ್, ಕೊಡಗಿನ ಶಮೀಲ್ ಯಾಕುಬ್ ಇಸಿಸ್ ಸೇರಿದ ಕನ್ನಡಿಗರಾಗಿದ್ದಾರೆ.
ಇದನ್ನು ಹೊರತುಪಡಿಸಿ ಇಸಿಸ್ಗೆ ಹೊರಡ ಹಲವಾರು ಮಂದಿಯನ್ನು ಹೈದರಾಬಾದ್ ಎರ್ಪೋರ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ.
ಒಟ್ಟಿನಲ್ಲಿ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಇಸಿಸ್ ಹೆಚ್ಚು ಪ್ರಭಾವ ಬೀರುತ್ತಿದೆ ಎಂಬ ಅಂಶ ಗುಪ್ತಚರ ಮಾಹಿತಿಯಿಂದ ಸ್ಪಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.