ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಎಸ್.ಚಂದ್ರಶೇಖರ್ ರಾವ್ ಅವರು ನಡೆಸುತ್ತಿರುವ ಐದು ದಿನಗಳ ಯಾಗದ ನಾಲ್ಕನೇ ದಿನವಾದ ಶನಿವಾರ ತಮಿಳುನಾಡು ಗವರ್ನರ್ ಕೆ.ರೋಸಯ್ಯ ಮತ್ತು ಎನ್ಸಿಪಿ ಮುಖಂಡ ಶರದ್ ಯಾದವ್ ಭಾಗವಹಿಸಿದ್ದರು.
ಮೇಧಕ್ ಜಿಲ್ಲೆಯ ಇರವೆಲ್ಲಿ ಗ್ರಾಮದಲ್ಲಿ ‘ಆಯುತ ಚಂಢಿ ಮಹಾ ಯೋಗಂ’ ನಡೆಯುತ್ತಿದ್ದು, ವಿಶ್ವದ ಶಾಂತಿ ಮತ್ತು ಒಳಿತಿಗಾಗಿ ಡಿ.23ರಿಂದ ಈ ಯಾಗ ನಡೆಯುತ್ತಿದೆ.
ಆಂಧ್ರ ಗವರ್ನರ್ ಇಎಸ್ಎಲ್ ನರಸಿಂಹನ್, ಅವರ ಪತ್ನಿ ವಿಮಲಾ ನರಸಿಂಹನ್, ಮಹಾರಾಷ್ಟ್ರ ಗವರ್ನರ್, ಕಾಂಗ್ರೆಸ್ ಹಿರಿಯ ಮುಖಂಡ ಟಿ.ಸುಬ್ರಹಣ್ಯ ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ.
ತೆಲಂಗಾಣ, ಆಂಧ್ರ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದ ಸುಮಾರು 2 ಸಾವಿರ ಪಂಡಿತರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ನಾಳೆ ಯಾಗದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.