ಮುಂಬಯಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಮಾತನಾಡುವುದಿರಲಿ, ಅವರಿಗೆ ಸಲಹೆಗಳನ್ನೂ ನೀಡಲು ಕಾಂಗ್ರೆಸ್ ಮುಖಂಡರು ಮುಂದೆ ಬರುವುದಿಲ್ಲ, ಅಂತಹುದರಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ಅವರು ಒಂದಿಷ್ಟು ಪ್ರಯೋಜನಕಾರಿ ಸಲಹೆಗಳನ್ನು ನೀಡುವ ಧೈರ್ಯ ತೋರಿಸಿದ್ದಾರೆ.
ಸೋಲಿನ ಬಳಿಕ ರಾಹುಲ್ ಬಹಳಷ್ಟು ಪ್ರಗತಿ ಕಂಡಿದ್ದಾರೆ, ಆದರೆ ಸಂಸತ್ತಿನಲ್ಲಿ ಅವರು ಹೆಚ್ಚು ಹೆಚ್ಚು ಮಾತನಾಡಬೇಕು. ಮಾತ್ರವಲ್ಲದೇ ದೇಹಭಾಷೆಯನ್ನೂ ಉತ್ತಮಪಡಿಸಿಕೊಳ್ಳಬೇಕು ಎಂದಿದ್ದಾರೆ.
‘ಸಂಸತ್ತನ್ನು ಸಕ್ರಿಯವಾಗಿ ಬಳಕೆ ಮಾಡುವುದರಿಂದ ಅವರ ನಿಖರತೆ ಹೆಚ್ಚುತ್ತದೆ. ಇದರೊಂದಿಗೆ ಅವರು ತಮ್ಮ ದೇಹಭಾಷೆಯತ್ತ ಹೆಚ್ಚು ಗಮನ ನೀಡಬೇಕು. ಇದರಿಂದ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಉಪಯೋಗವಾಗುತ್ತದೆ’ ಎಂದಿದ್ದಾರೆ.
ಉಭಯ ಸದನಗಳ ಕಲಾಪವನ್ನು ನೇರ ಪ್ರಸಾರ ಮಾಡಲಾಗುತ್ತದೆ, ಹೀಗಾಗಿ ಅವರು ಕನಿಷ್ಠ 45 ನಿಮಿಷವಾದರೂ ಮಾತನಾಡಬೇಕು. ಅಧಿವೇಶನ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಇರುವ ಏಕೈಕ ಆಯ್ಕೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.