ತಿರುವನಂತಪುರಂ: ಸೌದಿಯಲ್ಲಿ ತಮ್ಮ ಮಾಲೀಕನಿಂದ ದೈಹಿಕ ಹಿಂಸೆಗೊಳಗಾಗುತ್ತಿದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಭಾರತದ ಮೂವರನ್ನು ರಕ್ಷಿಸಲಾಗಿದ್ದು, ಇಂದು ಬೆಳಿಗ್ಗೆ ಅವರು ಸ್ವದೇಶಕ್ಕೆ ಮರಳಿದ್ದಾರೆ.
ಈ ಮೂವರು ತಮ್ಮ ಮಾಲೀಕನಿಂದ ತೀವ್ರ ತರಹದ ಹಿಂಸೆಗೆ ಒಳಗಾಗುತ್ತಿರುವ ವಿಡಿಯೋವೊಂದು ಹರಿದಾಡಿ ಕೇರಳದಲ್ಲಿ ಆಭರೀ ಸಂಚಲನವನ್ನೇ ಸೃಷ್ಟಿಸಿತ್ತು. ಈ ವೀಡಿಯೋದಲ್ಲಿ ಮಾಲೀಕ ಇವರಿಗೆ ಮರದ ತುಂಡಿನಲ್ಲಿ ಬಡಿಯುತ್ತಿರುವ ದೃಶ್ಯವಿತ್ತು.
ಈ ಮೂವರನ್ನು ಅಭಿಷೇಕ್, ವಿಮಲ್, ಬೈಜು ಎಂದು ಗುರುತಿಸಲಾಗಿದೆ, ಕೇರದ ಹರಿಪಾದ್ ನಗರದವರು. ತಮ್ಮ ನೀಡಲಾಗುತ್ತಿದ್ದ ಶಿಕ್ಷೆಯ ಚಿತ್ರೀಕರಣ ಮಾಡಿ ಇವರು ತಮ್ಮ ಕುಟುಂಬಕ್ಕೆ ಕಳುಹಿಸಿದ್ದರು.
ಏಜೆಂಟ್ ಒಬ್ಬ ಇವರು ಯೆಮನ್ನಲ್ಲಿ ಎಲೆಕ್ಟ್ರೀಶಿಯನ್ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದಿದ್ದ, ಆದರೆ ಸೌದಿಯ ಅಭನಲ್ಲಿ ಇವರನ್ನು ಇಳಿಸಿದ, ಬಳಿಕ ಇಟ್ಟಿಗೆ ಕಾರ್ಖಾನೆಯಲ್ಲಿ ಇವರನ್ನು ಬಲವಂತವಾಗಿ ದುಡಿಸಲಾಯಿತು.
ವೀಡಿಯೋ ಕಂಡ ಬಳಿಕ ಇವರ ಕುಟುಂಬ ಸದಸ್ಯರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇವರ ಹಿಂದುರಿಗುವಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಅವರೀಗ ನರಕದಿಂದ ವಾಪಾಸ್ ತಾಯ್ನಾಡಿಗೆ ಆಗಮಿಸಿದ್ದಾರೆ, ಏಜೆಂಟ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯವರ್ತಿಗಳ ಸುಳ್ಳು ಆಮಿಷಗಳಿಗೆ ಬಲಿಯಾಗಿ ವಿದೇಶಗಳಿಗೆ ಅದೆಷ್ಟೋ ಮಂದಿ ಕಳ್ಳಸಾಗಾಣೆಯಾಗುತ್ತಿದ್ದಾರೆ. ಈ ಘಟನೆಯ ಬಳಿಕವಾದರೂ ಜನರು ಎಚ್ಚೆತ್ತುಕೊಳ್ಳುವುದು ಅಗತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.