ನವದೆಹಲಿ: ತಡವಾಗಿಯಾದರೂ ರಾಜ್ಯಸಭೆಯಲ್ಲಿ ಬಾಲಪರಾಧಿ ತಿದ್ದುಪಡಿ ಕಾಯ್ದೆ ಚರ್ಚೆಗೆ ಬಂದಿದೆ. ಮಂಗಳವಾರ ರಾಜ್ಯಸಭಾ ಸದಸ್ಯರುಗಳು ಮಸೂದೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪೋಷಕರು ಈ ಚರ್ಚೆಯನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರು ಬಾಲಪರಾಧಿ ಕಾಯ್ದೆ ಜಾರಿಯನ್ನು ಸಮರ್ಥಿಸಿಕೊಂಡು ದೃಢವಾದ ಭಾಷಣ ಮಾಡಿದ್ದು, ಮಸೂದೆ ಮಂಡನೆಗೆ ಸಹಕರಿಸುವಂತೆ ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಟಿಎಂಸಿ ಸದಸ್ಯ ಡೆರಿಕ್ ಓ’ಬ್ರೈನ್ ಅವರೂ ಮಸೂದೆ ಮಂಡನೆ ಅತ್ಯಗತ್ಯ ಎಂದರು. ಅಲ್ಲದೇ ಸದ್ಯ ಸಿದ್ಧಪಡಿಸಿರುವ ಮಸೂದೆ ಉತ್ತಮವಾಗಿದ್ದು, ಇದಕ್ಕಿಂತಲೂ ಉತ್ತಮ ಮಸೂದೆಗೆ ಕಾಯುವ ಅಗತ್ಯವಿಲ್ಲ ಎಂದಿದ್ದಾರೆ.
ನಿರ್ಭಾಯಾ ಗ್ಯಾಂಗ್ರೇಪ್ ಬಾಲಪರಾಧಿ ಬಿಡುಗಡೆಗೊಂಡ ಬಳಿಕ ನಮ್ಮ ನಾಯಕರುಗಳಿಗೆ ಮಸೂದೆಯ ಬಗ್ಗೆ ಚರ್ಚೆ ನಡೆಸಲು ಸಮಯ ಸಿಕ್ಕಿದ್ದು ದುರಾದೃಷ್ಟ. ಆದರೂ ತಡವಾಗಿಯಾದರೂ ಎಚ್ಚೆತ್ತುಕೊಂಡರಲ್ಲ ಎಂಬ ಸಮಾಧಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.