ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಮಾಣ ಸಾಮಾಗ್ರಿಗಳನ್ನು ತಂದು ಹಾಕುವ ಪ್ರಕ್ರಿಯೆ 1990ರಿಂದಲೂ ನಡೆಯುತ್ತಿದೆ, ಇವುಗಳನ್ನು ರಾಮ್ ಸೇವಕ್ ಧಾಮ್ನಲ್ಲಿ ಸಂಗ್ರಹಿಸಿಡಲಾಗುತ್ತಿದೆ ಎಂದು ವಿಎಚ್ಪಿ ಹೇಳಿದೆ.
ಅಯೋಧ್ಯೆಯಲ್ಲಿ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್ಪಿ, ನಮಗೆ ಕೇಂದ್ರ ಸರ್ಕಾರದಿಂದ ಮಂದಿರ ನಿರ್ಮಾಣಕ್ಕೆ ಯಾವುದೇ ಸೂಚನೆಗಳು ಬಂದಿಲ್ಲ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸಂಪೂರ್ಣ ಸುಳ್ಳು. ಕಾನೂನಿನನ್ವಯವೇ ನಾವು ಮಂದಿರ ನಿರ್ಮಿಸುತ್ತೇವೆ. ನ್ಯಾಯಾಂಗದ ತೀರ್ಪನ್ನು ವಿಎಚ್ಪಿ ಗೌರವಿಸುತ್ತದೆ ಎಂದಿದೆ.
ಕೇಂದ್ರದಿಂದ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸ್ವಾಮಿ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ ಎಂಬ ಮಾಧ್ಯಮಗಳ ವರದಿ ತಪ್ಪು ಗ್ರಹಿಕೆಯಿಂದ ಕೂಡಿದ್ದು, ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಸೂಚನೆಗಳನ್ನು ನಾವು ಪಡೆದುಕೊಂಡಿಲ್ಲ. ಅಯೋಧ್ಯಾದಲ್ಲಿನ ಸಂತರು, ವಿಎಚ್ಪಿ ಸಂಸತ್ತಿನಲ್ಲಿ ಮಸೂದೆ ಮಂಡನೆಗೊಳ್ಳುವ ಮೂಲಕವೇ ಮಂದಿರ ನಿರ್ಮಾಣ ಸಾಧ್ಯ ಎಂಬುದನ್ನು ನಂಬಿದೆ ಎಂದು ವಿಎಚ್ಪಿಯ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಪ್ರತಿದಿನ ಅಪಾರ ಪ್ರಮಾಣದ ಭಕ್ತರು ಅಯೋಧ್ಯೆಗೆ ಭೇಟಿ ಕೊಡುತ್ತಿದ್ದಾರೆ, ಇವತ್ತಿನವರೆಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಹಿಂದೂ ಸಮುದಾಯಕ್ಕೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.