ಇಸ್ಲಾಮಾಬಾದ್: ಉಭಯ ದೇಶಗಳ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗೆ ಭಂಗ ಬಾರದಂತೆ ನೋಡಿಕೊಳ್ಳುವ ಸಲುವಾಗಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ತನ್ನ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.
ಶಾಂತಿ ಮಾತುಕತೆಗೆ ಹಾನಿಯಾಗುವ ರೀತಿ ಯಾವುದೇ ಹೇಳಿಕೆಗಳನ್ನು, ಪ್ರಕಟನೆಗಳನ್ನು ಹೊರಡಿಸದಂತೆ ನವಾಝ್ ಅವರು ತನ್ನ ಸಚಿವರುಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಹೇಳಿಕೆಗಳು ಶಾಂತಿ ಮಾತುಕತೆಯನ್ನು ಪ್ರೇರೆಪಿಸುವಂತೆ ಇರಬೇಕೇ ಹೊರತು ಇತಿಹಾಸವನ್ನು ಕೆದಕುವಂತಿರಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ನವಾಝ್ ಮತ್ತು ಪಾಕ್ ಸೇನೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಬಯಸಿದೆ, ಮಾತುಕತೆಯಲ್ಲಿ ಕಾಶ್ಮೀರ, ಭಯೋತ್ಪಾನೆ,, ವ್ಯಾಪಾರಗಳು ಚರ್ಚೆಗೆ ಬರಬೇಕು ಎಂಬುದು ಅದರ ಆಶಯ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.