ನವದೆಹಲಿ: ರಷ್ಯಾದ ಎಸ್-400 ರಕ್ಷಣಾ ಕ್ಷಿಪಣಿಯನ್ನು ಖರೀದಿಸಲು ಭಾರತ ರೂ. 39,000 ಕೋಟಿಯನ್ನು ಬಿಡುಗಡೆ ಮಾಡಿದೆ. ಈ ಕ್ಷಿಪಣಿಯು ಶತ್ರುಗಳ ಏರ್ಕ್ರಾಫ್ಟ್, ಸ್ಟೀಲ್ತ್ ಫೈಟರ್, ಕ್ಷಿಪಣಿ ಮತ್ತು ದ್ರೋಣ್ಗಳನ್ನು 400ಕಿ.ಮೀ ದೂರದಿಂದಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ನೇತೃತ್ವದ ಡಿಎಸಿ( defence acquisitions council) ಕ್ಷಿಪಣಿ ಖರೀದಿಯ ನಿರ್ಧಾರವನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರ ಮಾಸ್ಕೋ ಭೇಟಿಯ ಮುನ್ನ ಈ ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಕ್ಷಿಪಣಿಯ ಖರೀದಿಯ ಬಳಿಕ ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ವೃದ್ಧಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.