ನವದೆಹಲಿ: 2012ರ ದೆಹಲಿ ಗ್ಯಾಂಗ್ರೇಪ್ನ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೀಗಾಗಿ ಡಿ.21ರಂದು ಭಾನುವಾರ ಆತ ಬಿಡುಗಡೆಯಾಗಲಿದ್ದಾನೆ.
ಬಿಡುಗಡೆಯ ಬಳಿಕ ಆತನಿಗೆ ನೀಡಬೇಕಾದ ಪುನವರ್ಸತಿಯ ಬಗ್ಗೆ ಆತನ ಕುಟುಂಬಿಕರು ಮತ್ತು ದೆಹಲಿ ಸರ್ಕಾರ ಪರಸ್ಪರ ಸಮಾಲೋಚನೆ ನಡೆಸುವಂತೆ ಬಾಲನ್ಯಾಯಮಂಡಳಿ ಸೂಚನೆ ನೀಡಿದೆ.
ಆತನ ಬಿಡುಗಡೆಗೆ ಗ್ಯಾಂಗ್ ರೇಪ್ನಲ್ಲಿ ಮೃತಳಾದ ಯುವತಿ ಜ್ಯೋತಿ ಸಿಂಗ್ಳ ತಾಯಿ ಆಶಾದೇವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತನ ಬಿಡುಗಡೆ ಸಮಾಜಕ್ಕೆ ಒಳ್ಳೆಯದಲ್ಲ, ಒಂದು ವೇಳೆ ಆತನನ್ನು ಬಿಡುಗಡೆಗೊಳಿಸಿದರೆ ಆತನ ಮುಖವನ್ನು ಸಮಾಜಕ್ಕೆ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತರ ಐವರು ಆರೋಪಿಗಳಿಗೆ ಹೈಕೋರ್ಟ್ ಮರಣದಂಡನೆಯ ಶಿಕ್ಷೆ ವಿಧಿಸಿದೆ. ಅಪರಾಧ ಎಸಗುವ ಸಂದರ್ಭದಲ್ಲಿ 18 ವರ್ಷ ತುಂಬಿರದ ಹಿನ್ನಲೆಯಲ್ಲಿ ಬಾಲಾಪರಾಧಿ ಪಾರಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.