ನವದೆಹಲಿ: ಗುಜರಾತ್ನಲ್ಲಿ ಆರಂಭವಾಗಲಿರುವ ಮೆಗಾ ಫ್ಯಾಕ್ಟರಿಯನ್ನು ತನ್ನ ಪೋಷಕ ಸಂಸ್ಥೆ ಸುಝುಕಿಗೆ ಹಸ್ತಾಂತರಿಸಲು ನಡೆದ ವೋಟಿಂಗ್ನಲ್ಲಿ ಮಾರುತಿ ಸುಝುಕಿ ಗೆದ್ದಿದೆ.
ಶೇ.90ರಷ್ಟು ಶೇರುದಾರರು ಕಾರ್ಖಾನೆ ನಿರ್ಮಿಸಲು ಒಪ್ಪಿಗೆ ವ್ಯಕ್ತಪಡಿಸಿದ್ದು, ಇನ್ನುಳಿದ ಶೇರುದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯನ್ನು ಮಾರುತಿ ಬದಲು ಸುಝುಕಿಗೆ ವರ್ಗಾಯಿಸಿದ್ದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟಿಸಿದ್ದಾರೆ.
ಸುಮಾರು 18,500 ಕೋಟಿ ಬಂಡವಾಳದೊಂದಿಗೆ 2017ರ ಆರಂಭದಲ್ಲಿ ಗುಜರಾತ್ ಕಾರ್ಖಾನೆಯು ಕಾರುಗಳನ್ನು ಉತ್ಪಾದಿಸಲಿದೆ. ಹರಿಯಾಣ ಮತ್ತು ಗುರ್ಗಾಂವ್ ಕಾರ್ಖಾನೆಗಳಲ್ಲಿ ಪ್ರಸ್ತುತ ವಾರ್ಷಿಕ 14 ಲಕ್ಷ ಕಾರುಗಳು ಉತ್ಪಾದಿಸಲಾಗುತ್ತಿದ್ದು, ಗುಜರಾತ್ ಕಾರ್ಖಾನೆಯಿಂದ 15 ಲಕ್ಷ ಹೆಚ್ಚುವರಿ ಕಾರುಗಳನ್ನು ಉತ್ಪಾದಿಸುವ ಭರವಸೆ ಹೊಂದಿದೆ.
ಕಂಪೆನಿಯು ಶೇರುದಾರರು ಒಪ್ಪಂದಕ್ಕೆ ಅನುಮೋದನೆ ನೀಡುವಂತೆ ಮನವೊಲಿಸಲು ಲಂಡನ್, ಸಿಂಗಾಪುರ, ಅಮೇರಿಕ, ಹಾಂಗ್ಕಾಂಗ್, ಮುಂಬಯಿ ಹಾಗೂ ರೋಡ್ ಶೋಗಳನ್ನು ನಡೆಸಿದೆ. ಕಂಪೆನಿಯ ಹೊಸ ನಿಯಮಗಳ ಪ್ರಕಾರ ಶೇ.50ರಷ್ಟು ಶೇರುದಾರರು ಸ್ಥಾವರದ ನಿಯಂತ್ರಣ ಹೊಂದಲು ಒಪ್ಪಂದವನ್ನು ಅನುಮೋದಿಸುವುದು ಅಗತ್ಯ. 13 ಕೋಟಿ ಶೇರುದಾರರಲ್ಲಿ 6.5 ಕೋಟಿ ಶೇರುದಾರರು ಮತ ಚಲಾಯಿಸಲು ನಿರಾಕರಿಸಿದ್ದು, ಮೂಲ ಸಂಸ್ಥೆ ಸುಝುಕಿ ಪರವಾಗಿ ಮೊಹರು ಹಾಕಲಾಗಿದೆ ಎಂದು ಕಂಪೆನಿಯ ಅಧ್ಯಕ್ಷ ಆರ್. ಸಿ. ಭಾರ್ಗವ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.