ನವದೆಹಲಿ: ದೆಹಲಿಯ ವಿವಿಧ ಶಾಲೆಗಳ 2000 ವಿದ್ಯಾರ್ಥಿಗಳು ಕಳೆದ ವಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಲ್ಲಿ ನಡೆಸಿದ ವಿಶ್ವದ ಅತಿದೊಡ್ಡ ’ಪ್ರಯೋಗ ವಿಜ್ಞಾನ ಪಾಠ’ ಗಿನ್ನೆಸ್ ದಾಖಲೆ ನಿರ್ಮಿಸಿದೆ.
ಉತ್ತರ ನೆದರ್ಲ್ಯಾಂಡ್ನ 1,339 ವಿದ್ಯಾರ್ಥಿಗಳು ನಡೆಸಿದ ಪ್ರಯೋಗ ವಿಜ್ಞಾನ ಪಾಠ ಈ ಹಿಂದಿನ ದಾಖಲೆಯಾಗಿದೆ. ಅದನ್ನೀಗ ದೆಹಲಿ ವಿದ್ಯಾರ್ಥಿಗಳು ಮುರಿದಿದ್ದಾರೆ.
ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಅಂಗವಾಗಿ 5 ದಿನಗಳ ಕಾಲ ನಡೆದ ಪ್ರಯೋಗ ಪಾಠ ಕಾರ್ಯಕ್ರಮಕ್ಕೆ ದೆಹಲಿಯ ಸುಮಾರು 40 ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿ ಶಾಲೆಯಿಂದ ಸುಮಾರು 50ರಷ್ಟು ವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ.
ಶಾಲಾ ಶಿಕ್ಷಕರಿಂದ ತರಬೇತಿ ಪಡೆದ ಈ ವಿದ್ಯಾರ್ಥಿಗಳು ಎಲೆಫಂಟ್ ಟೂಥ್ಪೇಸ್ಟ್ ರಿಯಾಕ್ಷನ್ ಭಾಗವಾಗಿ ಕೆಂಪು- ಕಂದು ಬಣ್ಣ, ಹೈಡ್ರೋಜನ್ ಪೆರಾಕ್ಸೈಡ್ ಮೂಲಕ ನೊರೆಗೂಡಿದ ಹಗ್ಗ ಉತ್ಪಾದಿಸುವ ಪ್ರಯೋಗ ನಡೆಸಿದರು. ಈ ಪ್ರಯೋಗದ ವೀಡಿಯೋವನ್ನು ಗಿನ್ನೆಸ್ ಬುಕ್ಗೆ ಕಳುಹಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಎನ್ಜಿಓ ಸಂಸ್ಥೆಯ ವಿಜ್ಞಾನ ಭಾರತಿ (ವಿಭಾ) ಐಐಟಿ ಉತ್ಸವದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಇಲಾಖೆಯಿಂದ ಆಯೋಜಿಸಲಾಗಿತ್ತು.
ಕೇಂದ್ರ ಸಚಿವೆ ಸೃತಿ ಇರಾನಿ ಮುಂಬರುವ ತಿಂಗಳುಗಳಲ್ಲಿ ದೇಶದ ಹಲವು ಶಾಲೆಗಳ ವಿದ್ಯಾರ್ಥಿಗಳಿಂದ ’ವಿಜ್ಞಾನ ಪಾಠ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.