ತಿರುವನಂತಪುರಂ: ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಜಟಾಯು ಹಕ್ಕಿಯ ಬೃಹತ್ ಶಿಲ್ಪವನ್ನು ಶೀಘ್ರದಲ್ಲೇ ನೋಡಲಿದ್ದೇವೆ.
ಕೇರಳದಲ್ಲಿ ಜಟಾಯು ನೇಚರ್ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಇದರ ಮೊದಲ ಹಂತ ಕಾಮಗಾರಿ 2016ರ ಜನವರಿಯಿಂದಲೇ ಆರಂಭಗೊಳ್ಳಲಿದೆ. ಇದು ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಯಾಗಿದೆ.
ಕೊಲ್ಲಂ ಜಿಲ್ಲೆಯಲ್ಲಿ ಇದು ನಿರ್ಮಾಣವಾಗಲಿದ್ದು, 65 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದೆ. ಇದಕ್ಕಾಗಿ 100 ಕೋಟಿ ರೂಪಾಯಿ ಬಿಡುಗಡೆಗೊಂಡಿದೆ.
ಇದರಲ್ಲಿ ಪ್ರಾಕೃತಿಕ ಲಕ್ಷಣಗಳಾದ ಸಣ್ಣ ಪರ್ವತಗಳು, ಕಣಿವೆಗಳು, ಬಂಡೆಗಳು, ರಾಕ್ ರಚನೆಗಳು ಇರಲಿವೆ. ಜಟಾಯು ಹಕ್ಕಿಯ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ. ಇದರ ಅಳತೆ 200 ft x 150 ft x 70 ft ಇರಲಿದ್ದು, ಗುಡ್ಡದ ಮೇಲೆ ಇದನ್ನು ಕೂರಿಸಲಾಗುತ್ತದೆ. ಇದರ ಒಳಗೆ 6ಡಿ ಥಿಯೇಟರ್, ಆಡಿಯೋ ಮತ್ತು ವೀಡಿಯೋ ಹೊಂದಿರುವ ಡಿಜಿಟಲ್ ಮ್ಯೂಸಿಯಂ ರಚಿಸಲಾಗುತ್ತದೆ. ಇಲ್ಲಿ ರಾಮಾಯಣದ ಬಗೆಗಿನ ಮಾಹಿತಿಗಳು ಲಭ್ಯವಾಗಲಿದೆ.
ಜಟಾಯು ಸೀತೆಯನ್ನು ರಾವಣದಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ಇದೇ ಜಾಗದಲ್ಲಿ ಬಿದ್ದಿತ್ತು ಎಂಬುದು ಸ್ಥಳೀಯರ ನಂಬಿಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.